ಪುಟಿನ್ ಭೇಟಿ ಮಾಡಲು ಸಿದ್ಧ ಎಂದ ಉಕ್ರೇನ್ ಅಧ್ಯಕ್ಷ

Promotion

ಬೆಂಗಳೂರು, ಮಾರ್ಚ್ 06, 2022 (www.justkannada.in): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಸಿದ್ಧ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ವೊಲೊಡಿಮಿರ್ ಝೆಲೆನ್ಸ್ಕಿಮತ್ತು ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಅಂಕಾರಾ ಅಥವಾ ಇಸ್ತಾನ್‌ಬುಲ್‌ನಲ್ಲಿ ಪುಟಿನ್ ಅವರನ್ನು ಭೇಟಿಯಾಗಲು ಸಿದ್ಧ ಎಂದು ಝೆಲೆನ್ಸ್ಕಿಹೇಳಿದ್ದಾರೆ.

ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಶನಿವಾರ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದ ರಷ್ಯಾ, ಕೆಲವೇ ಗಂಟೆಗಳಲ್ಲಿ ಮತ್ತೆ ಉಕ್ರೇನ್​ನ ಹಲವು ನಗರಗಳಲ್ಲಿ ಶೆಲ್ ದಾಳಿ ನಡೆಸುವ ಮೂಲಕ ಉಲ್ಲಂಘನೆ ಮಾಡಿತ್ತು.

ಈ ನಡುವೆ ರಷ್ಯಾದ ಸೇನಾಪಡೆ ಕದನ ವಿರಾಮವನ್ನು ಘೋಷಿಸಿದ್ದರೂ ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿದೆ’ ಎಂದು ಝೆಲೆನ್ಸ್ಕಿ ಕಚೇರಿ ತಿಳಿಸಿದೆ.