ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ಡೈರೆಕ್ಟರ್ ಲಿಸ್ಟ್’ನಲ್ಲಿ ಪ್ರಶಾಂತ್ ನೀಲ್ ಹೆಸರು !

ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್-5 ಡೈರೆಕ್ಟರ್ ಪ್ರಶಾಂತ್ ನೀಲ್ ಹೆಸರು ಕೂಡ ಕೇಳಿ ಬರುತ್ತಿವೆ.

ಪ್ರಶಾಂತ್ ನಿರ್ದೇಶನದ ಮುಂದಿನ ಸಿನಿಮಾಗೆ 150 ಕೋಟಿ ಬಂಡವಾಳದೊಂದಿಗೆ ಸಂಪೂರ್ಣ ಬೆಂಬಲ ನೀಡಲು ಮೈತ್ರಿ ಮೂವಿ ಮೇಕರ್ಸ್ ರೆಡಿಯಾಗಿದೆ.

ಪ್ರಶಾಂತ್ ನೀಲ್ ಅವರಿಗೆ ಮುಂಗಡವಾಗಿ ಬರೋಬ್ಬರಿ 2 ಕೋಟಿ ರೂ.ಗಳನ್ನು ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಮೂಲಕ ರಾಜಮೌಳಿ ಮತ್ತು ನಿರ್ದೇಶಕ ಶಂಕರ್ ಬಳಿಕ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್-5 ಡೈರೆಕ್ಟರ್ ಪ್ರಶಾಂತ್ ನೀಲ್ ಹೆಸರೂ ಸೇರುತ್ತಿದೆ.

ಕಾಲಿವುಡ್​ನ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರಿಗೆ 5 ರಿಂದ 10 ಕೋಟಿ ಸಂಭಾವನೆ ಸಿಗುವುದು ಕನ್ಫರ್ಮ್​ ಎನ್ನಲಾಗಿದೆ.