ತಾಯಿಯನ್ನು ಕೊಂದಿದ್ದ ಪುತ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್.

ಬೆಂಗಳೂರು, ಡಿಸೆಂಬರ್,20,2023(www.justkannada.in):  ಮನೆ ಮಾರಾಟ ಮಾಡುವ ವಿಚಾರಕ್ಕೆ ಜಗಳವಾಡಿ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪುತ್ರನಿಗೆ ಬೆಂಗಳೂರಿನ ಸಿಸಿಹೆಚ್ 65 ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ  ವಿಧಿಸಿದೆ.

ಶರತ್ ಕುಮಾರ್ ಜೀವಾವಿಧಿ ಶಿಕ್ಷೆಗೆ ಗುರಿಯಾದ ಅಪರಾಧಿ.  2018 ರ ಜೂನ್ 13 ರಂದು ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಮನೆ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಕಾತ್ಯಾಯಿನಿ ಜೊತೆ ಪುತ್ರ ಶರತ್ ಕುಮಾರ್ ಜಗಳವಾಡಿದ್ದ. ಈ ವೇಳೆ ಶರತ್​, ತಾಯಿಯ ಮೂಗು ಮತ್ತು ಬಾಯಿಯನ್ನು ಬಲವಾಗಿ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದ. ಬಳಿಕ ಸಾಕ್ಷ್ಯಾಧಾರಗಳ ನಾಶಕ್ಕೂ ಯತ್ನಿಸಿದ್ದ ಎ‍ನ್ನಲಾಗಿದೆ. . ಇದೀಗ 5 ವರ್ಷಗಳ ನಂತರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಎಂ.ಎಸ್, ಕಲ್ಪನಾ ಅವರು​ ತೀರ್ಪು ನೀಡಿದ್ದಾರೆ.

ಆರೋಪಿ ಶರತ್ ಕುಮಾರ್​ಗೆ IPC ಕಲಂ 302 ಕ್ಕೆ ಜೀವಾವಧಿ ಶಿಕ್ಷೆ, ಹಾಗೂ ಕಲಂ 201 ಸಾಕ್ಷಿ ನಾಶಪಡಿಸಿದಕ್ಕೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ. ಸರ್ಕಾದಪರ ಅಭಿಯೋಜಕ ಎಂ.ವಿ ತ್ಯಾಗರಾಜ ಅವರು ವಾದಿಸಿದ್ದರು.

Key words:  court -sentenced – son – killed -his mother – life imprisonment.