ಸಂಸತ್ ನಲ್ಲಿ ಅಧಿವೇಶನ ನಡೆಯಲು ಬಿಡದೆ ಕಾಂಗ್ರೆಸ್ ನಿಂದ ಲಜ್ಜೆಗೆಟ್ಟ ರಾಜಕಾರಣ- ಸಚಿವ ಗೋವಿಂದ ಕಾರಜೋಳ ಟೀಕೆ.

ಬೆಂಗಳೂರು,ಆಗಸ್ಟ್,18,2021(www.justkannada.in): ಸಂಸತ್ ನಲ್ಲಿ ಅಧಿವೇಶನ ನಡೆಯಲು ಬಿಡದೆ ಕಾಂಗ್ರೆಸ್ ನಿಂದ ಲಜ್ಜೆಗೆಟ್ಟ ರಾಜಕಾರಣ  ಮಾಡಿದೆ ಎಂದು ಜಲಸಂಪನ್ಮೂಲ  ಸಚಿವ ಗೋವಿಂದ ಕಾರಜೋಳ ಟೀಕೆಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ,  ಜುಲೈ22 ರಿಂದ ಆಗಸ್ಟ್ 13ರ ವರೆಗೂ ಸಂಸದ ಕಲಾಪ ನಡೆಯಿತು. ಕಲಾಪದಲ್ಲಿ ಕೋವಿಡ್ ನಿರ್ವಹಣೆ  ದೇಶದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಸಂಸತ್ ನಲ್ಲಿ ಅಧಿವೇಶನ ನಡೆಯಲು ಕಾಂಗ್ರೆಸ್ ಬಿಡಲಿಲ್ಲ  ಇದನ್ನ ನಾನು ಖಂಡಿಸುತ್ತೇನೆ ಎಂದರು.

ಹಲವು ವರ್ಷದ ಹಳೆಯ ಪಕ್ಷ ಸಂಸತ್‌ ನಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ಗೊತ್ತಿಲ್ಲ. ಕಾಂಗ್ರೆಸ್ ನವರು ಕುಟುಂಬದ ಹಾಗೂ ಮನೆತನದ ಹಿನ್ನೆಲೆ ಉಳ್ಳವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸುತ್ತಿರುವವರು. ಲಜ್ಜೆಗೆಟ್ಟು ಆಡಳಿತ ನಡೆಸಲು ಬಿಡದವರು ನೀವು ಎಂದು ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.

Key words: politics – Congress  -session – Parliament-Minister -Govinda Karajola.