ಶಿಷ್ಟಾಚಾರ ಪಾಲನೆಯಿಂದ ಅಪರಾಧ ಪತ್ತೆ ಪ್ರಕ್ರಿಯೆ ವಿಳಂಬ: ಆಷಾಢ ಶುಕ್ರವಾರಕ್ಕೆ ಬಿಗಿ ಭದ್ರತೆ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ…

ಮೈಸೂರು,ಜು,2,2019(www.justkannada.in):  ಶಿಷ್ಟಾಚಾರ ಪಾಲನೆಯಿಂದ ಅಪರಾಧ ಪತ್ತೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ಅವರು ಹೇಳಿದ್ದಾರೆ.

ಮೈಸೂರು ನಗರ ಪೊಲೀಸರಿಗೆ ವಿಐಪಿಗಳೇ ತಲೆ ಬಿಸಿಯಾಗಿದ್ದು ಮೈಸೂರಿನಲ್ಲಿ ಅಪರಾಧ ಹೆಚ್ಚಾಗಲು ವಿಐಪಿಗಳು ಕಾರಣಾನಾ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಖುದ್ದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅಸಹಾಯಕತೆ ತೊಡಿಕೊಂಡಿದ್ದಾರೆ.

ಅಪರಾಧ ಪ್ರಕರಣಗಳ ಪತ್ತೆ ಹಚ್ಚುವುದು ವಿಳಂಬಕ್ಕೆ ಸುದ್ದಿಗೋಷ್ಠಿಯಲ್ಲಿ ಕಾರಣ ನೀಡಿದ ಪೊಲೀಸ್ ಆಯುಕ್ತ‌ ಕೆ.ಟಿ ಬಾಲಕೃಷ್ಣ ಅವರು,  ಮೈಸೂರಿಗೆ ಯಾವಾಗಲೂ ವಿಐಪಿ ಮೂವ್ಮೆಂಟ್ ಇರುತ್ತದೆ. ಅವರಿಗೆ ಬಂದೋಬಸ್ತ್ ಮಾಡೋದು ನಮ್ಮ ಜವಾಬ್ದಾರಿ. ಈ ಕಾರಣಕ್ಕಾಗಿ ಅಪರಾಧ ಪ್ರಕರಣಗಳು  ಪತ್ತೆ ಹಚ್ಚಲು ಸಮಯ ಸಾಕಾಗುತ್ತಿಲ್ಲ. ಹೆಚ್ಚಿನ ಸಮಯ ಶಿಷ್ಟಾಚಾರ ಪಾಲನೆಯಲ್ಲೆ ವ್ಯಯವಾಗುತ್ತಿದೆ. ಶಿಷ್ಠಾಚಾರ ಪಾಲನೆ ಸಮಯದಲ್ಲಿ ಭದ್ರತೆ ಸಿಬ್ಬಂದಿ ನಿಯೋಜನೆ ಮಾಡಬೇಕಾಗುತ್ತದೆ. ಹೀಗಾಗಿ ಅಪರಾಧ ಪ್ರಕರಣಗಳ ಪತ್ತೆಗೆ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.

ಚಾಮುಂಡಿ ಬೆಟ್ಡದಲ್ಲಿ ಆಷಾಢ ಶುಕ್ರವಾರ ಹಿನ್ನೆಲೆ: ನಗರ ಪೋಲಿಸರಿಂದ ಬಿಗಿ ಪೋಲೀಸ್ ಬಂದೋಬಸ್ತ್

ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಹಿನ್ನೆಲೆ ನಗರ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ. ಗುರುವಾರ ರಾತ್ರಿಯಿಂದಲೆ ಪೋಲೀಸ್ ಬಂದೂಬಸ್ತ್ ವಹಿಸಲಾಗುತ್ತದೆ ಮೂರು ಪಾಳಿಗಳಲ್ಲಿ ಪೊಲೀಸರು ಕೆಲಸ ನಿರ್ವಹಿಸುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ತಿಳಿಸಿದರು.

ಭದ್ರತೆಗಾಗಿ ಸಂಚಾರಿ , ಅಪರಾದ ಪತ್ತೆ ದಳ , ನಗರ ಕಮಾಂಡೋ ಪಡೆ , ಅಶ್ವಾರೋಹಿದಳ 8 ಸಿಎಆರ್ ತುಕಡಿ, 4 ಕೆಎಸ್ ಆರ್ ಪಿ ತುಕಡಿ, 3 ಎಎಸ್ ಸಿ ಟೀಂ, 4 ಆಂಬುಲೆನ್ಸ್, 4 ಅಗ್ನಿಶಾಮಕ ದಳ, 2 ಇಂಟರ್ ಸೆಪ್ಟರ್ ವಾಹನ, ಮೊಬೈಲ್ ಕಮಾಂಡೊ ನಿಯೋಜನೆ ಮಾಡಲಾಗಿದೆ. ಒಟ್ಟು 8 ಜನ ಎಸಿಪಿ, 31 ಜನ ಪೋಲೀಸ್ ಇನ್ಪೆಕ್ಟರ್ , 28 ಜನ ಪಿಎಸ್ ಐ , 124ಜನ ಎಎಸ್ ಐ,  ಹಾಗೂ 160 ಜನ ಮಹಿಳಾ ಪೋಲೀಸ್ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೇರೆ ಜಿಲ್ಲೆ ರಾಜ್ಯಗಳಿಂದ ಪಿಕ್ವ ಪಾಕೇಟರ್ಸ್ , ಚೈನ್ ಸ್ನ್ಯಾಚರ್ಸ್ ಬರುವ ಸಂಭವವಿದೆ ಹೀಗಾಗಿ   ಅಕ್ಕಪಕ್ಕದ ಜಿಲ್ಲೆ ರಾಜ್ಯ ನುರಿತ ಕ್ರೈಂ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಭ್ರದತೆ ದೃಷ್ಟಿಯಿಂದ ವಿಶೇಷ  ಹೆಲ್ಪಲೈನ್, ಹಾಗೂ ಸಿಸಿ ಟಿವಿ ಅಳವಡಿಕೆ ಮಾಡಲಾಗುತ್ತಿದೆ. ಹೆಲಿಪ್ಯಾಡ್ ನ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಭದ್ರತೆ ಜೊತೆಗೆ ಶೌಚಾಲಯ, ವೈದಕೀಯ ಸೇವೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಭದ್ರತೆ ಬಗ್ಗೆ ಕೆ.ಟಿ ಬಾಲಕೃಷ್ಣ ಅವರು ಮಾಹಿತಿ ನೀಡಿದರು.

Key words: Police Commissioner -KT Balakrishna -information – tight security –ashada Friday.