ಯಾರೂ ಸಹ ಕಣ್ಣುಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ- ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ ಡಿ.ಕೆ ಶಿವಕುಮಾರ್…

ಬೆಂಗಳೂರು, ಜು.2,2019(www.justkannada.in): ಕಾಂಗ್ರೆಸ್ ನ ಇಬ್ಬರು ಶಾಸಕರು ರಾಜೀನಾಮೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ ಶಿವಕುಮಾರ್, ಯಾರೂ ಸಹ ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎಂದು ಗೊತ್ತಿದೆ ಎಂದು ಟಾಂಗ್  ನೀಡಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್,  ಯಾರು, ಏನು ಮಾಡುತ್ತಿದ್ದಾರೆ ಎಂದು ನಮಗೂ ಗೊತ್ತಿದೆ. ಸರ್ಕಾರ ಪತನಗೊಳಿಸುವ ಯಾವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಎಂದು  ಹೇಳಿದರು.

ಯಾವ ಶಾಸಕರನ್ನ ಮನವೊಲಿಸುವ ಅಗತ್ಯವಿಲ್ಲ. ಸರ್ಕಾರ ಉಳಿಯಬೇಕಂಬ ಆಶಯ ಎಲ್ಲರಿಗೂ ಇದೆ. ನಾಗೇಂದ್ರ ಬುದ್ದಿವಂತ. ಪಕ್ಷ ಬಿಟ್ಟು ಹೋಗಲ್ಲ. ಆನಂದ್ ಸಿಂಗ್ ನನಗೆ ಈಗಲೂ ಆತ್ಮೀಯ. ರಾಜೀನಾಮೆ ವಾಪಸ್ ಪಡೆಯುವ ವಿಶ್ವಾಸವಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ವಿದೇಶಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ  ಡಿ.ಕೆ.ಶಿವಕುಮಾರ್,  ಸರ್ಕಾರಕ್ಕೆ ಏನು ಆಗೊಲ್ಲ ಅಂತಾ ಅವರಿಗೂ ಗೊತ್ತಿದ. ಹೀಗಾಗಿ ಅವರು ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದಾರೆ ಎಂದು ಹೇಳಿದರು.

Key words:  minister -DK Shivakumar – gave –tong- BJP