ಕೇಂದ್ರದಿಂದ ವಿಪಕ್ಷ ನಾಯಕರನ್ನ ಸದೆ ಬಡಿಯುವ ಕೆಲಸ: ದುರುದ್ದೇಶದಿಂದ ಡಿಕೆ ಶಿವಕುಮಾರ್ ವಿರುದ್ದ ತನಿಖೆ -ಮಾಜಿ ಸಂಸದ ಧೃವ ನಾರಾಯಣ್ ಕಿಡಿ…

ಮೈಸೂರು,ಸೆ,3,2019(www.justkannada.in):  ಕೇಂದ್ರ ಸರ್ಕಾರದಿಂದ ವಿಪಕ್ಷ ನಾಯಕರನ್ನ ಸದೆ ಬಡಿಯುವ ಕೆಲಸವಾಗುತ್ತಿದೆ. ದುರುದ್ದೇಶದಿಂದ ಡಿಕೆ ಶಿವಕುಮಾರ್ ವಿರುದ್ದದ ತನಿಖೆ ಸರಿಯಲ್ಲ ಎಂದು ಮಾಜಿ ಸಂಸದ ಧೃವ ನಾರಾಯಣ್ ಕಿಡಿ ಕಾರಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ  ಧೃವ ನಾರಾಯಣ್, ಡಿ.ಕೆ ಶಿವಕುಮಾರ್ ಅವರನ್ನ 1983ರಿಂದಲೂ ನೋಡಿದ್ದೇನೆ. ಅವರು ಗಣಿಗಾರಿಕೆ, ರಿಯಲ್ ಎಸ್ಟೇಟ್ ಮಾಡ್ತಾರೆ. ಅದೇ ರೀತಿ ಶಾಸಕ ರಾಮದಾಸ್ ಸಾ,ರಾ ಮಹೇಶ್ ಸಹ ಮಾಡ್ತಾರೆ.ಡಿಕೆ.ಶಿವ ಕುಮಾರ್ ವಿರುದ್ದ ಮಾಡಲಿ ಬೇಡ ಅನ್ನಲ್ಲ. ಆದರೆ ತನಿಖೆ ದುರುದ್ಧೇಶದಿಂದ ಕೂಡಿದೆ. ಇದು ಸರಿಯಲ್ಲ ಎಂದು ಹರಿಹಾಯ್ದರು.

ಹಾಗೆಯೇ ಡಿ.ಕೆ ಶಿವಕುಮಾರ್ ವಿರುದ್ದ ಬಿಜೆಪಿ ನಾಯಕರ ಹೇಳಿಕೆ ಕುರಿತು ವಾಗ್ದಾಳಿ ನಡೆಸಿದ ಧೃವ ನಾರಾಯಣ್,  ಅಶ್ವಥ್ ನಾರಾಯಣ್ ಹೇಗೆ ಡಿಸಿಎಂ ಆದರು ಅಂತಾ ಜನರಿಗೆ ಗೊತ್ತು. ಅವರು ರಾಜ್ಯಮಟ್ಟದ ನಾಯಕರಲ್ಲ. ಲಕ್ಷ್ಮಣ್ ಸವದಿ ಅಶ್ವಥ್ ನಾರಾಯಣ್ 17 ಮಂದಿ ಶಾಸಕರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಪಾತ್ರ ವಹಿಸಿದ್ದರು. ಹೀಗಾಗಿ ಅವರಿಗೆ ಉನ್ನತ ಸ್ಥಾನ ನೀಡಿದ್ದಾರೆ. ಇವರಿಗೆ ಡಿ.ಕೆ ಶಿವಕುಮಾರ್ ವಿರುದ್ದ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದರು.

Key words: Opposition leader’—center-  Investigation- against- DK Sivakumar-Former MP -Dhruva Narayan -mysore