“ರೈತರ ಪ್ರತಿಭಟನೆ : ದೆಹಲಿಯ ಹಲವು ಕಡೆಗಳಲ್ಲಿ ರಾತ್ರಿವರೆಗೆ ಇಂಟರ್ ನೆಟ್ ಸೇವೆ ಸ್ಥಗಿತ”

0
187

ದೆಹಲಿ,ಜನವರಿ,26,2021(www.justkannada.in) : ರೈತರ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಮೊಳಗುತ್ತಿದೆ. ದೆಹಲಿಯಲ್ಲಿ ರೈತರ ಪ್ರತಿಭಟನೆ ತಾರಕಕ್ಕೇರುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಇಲಾಖೆಯ ಸೂಚನೆಯಂತೆ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.jkದೆಹಲಿಯಲ್ಲಿ ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ಇಂದು ನಡೆಯುತ್ತಿರುವಂತ ರೈತರ ಟ್ರ್ಯಾಕ್ಟರ್ ಪರೇಡ್ ಪಥ ಸಂಚಲನದ ಪ್ರತಿಭಟನೆ, ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಂಪು ಕೋಟೆಗೆ ಮುತ್ತಿಗೆ ಹಾಕಿರುವಂತ ರೈತರು, ರಾಷ್ಟ್ರದ ರಾಜಧಾನಿಯಲ್ಲಿ ತಮ್ಮ ಕಿಚ್ಚನ್ನು ಮೊಳಗಿಸಿದ್ದಾರೆ.ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿರುವಂತ ಸಿಂಘು ಗಡಿ, ಗಾಜೀಪುರ ಗಡಿ, ತಿಕ್ರಿ ಗಡಿ, ಮುಕ್ರಬಾ ಚೌಕ್ ಹಾಗೂ ನಂಗೋಲಿ ಸೇರಿದಂತೆ ಅನೇಕ ಪ್ರದೇಶದಲ್ಲಿ ಕೇಂದ್ರ ಗೃಹ ಇಲಾಖೆಯ ಸೂಚನೆಯ ಮೇರೆಗೆ ರಾತ್ರಿ 12 ಗಂಟೆಯವರೆಗೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

key words : Farmers-Tractor-Parade-many-parts-Delhi-Internet-overnight-shutdown