ಅವರು ರೈತರಲ್ಲ, ಸಂಪೂರ್ಣ ಭಯೋತ್ಪಾದಕರು: ಇದಕ್ಕೆ ಪಾಕಿಸ್ತಾನದ ಕುಮ್ಮಕ್ಕಿದೆ ಎಂದ ಸಚಿವ ಬಿ.ಸಿ ಪಾಟೀಲ್…

ಕೊಪ್ಪಳ,ಜನವರಿ,26,2021(www.justkannada.in): ಕೇಂದ್ರ ಸರ್ಕಾರದ ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಉಗ್ರರೂಪಕ್ಕೆ ತಿರುಗಿದ್ದು  ಪ್ರತಿಭಟನಾನಿರತ ಅನ್ನದಾತರು ಕೆಂಪುಕೋಟೆಗೆ  ಮುತ್ತಿಗೆ ಹಾಕಿ   ಧ್ವಜ ಹಾರಿಸಿದ್ದಾರೆ.jk

ಈ ಬಗ್ಗೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ ಪಾಟೀಲ್, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಭಯೋತ್ಪಾದನೆ ಕೃತ್ಯ. ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಸಂಪೂರ್ಣ ಭಯೋತ್ಪಾದಕರು. ಅವರಿಗೆ ಪಾಕಿಸ್ತಾನದ ಕುಮ್ಮಕ್ಕಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.They are- not farmers- terrorists-Minister BC Patil

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪದಕರು, ಅವರಿಗೆ ಪಾಕಿಸ್ತಾನ ಸಪೋರ್ಟ್‌ ಇದೇ ಎನ್ನುವುದರ ಮೂಲಕ ಅನ್ನದಾತರ ಆಕ್ರೋಶಕ್ಕೆ  ಸಚಿವ ಬಿಸಿ ಪಾಟೀಲ್ ತುತ್ತಾಗಿದ್ದಾರೆ. ರೈತರು ಹೀಗೆಲ್ಲ ಕಾನೂನು ಕೈಗೆ ಎತ್ತಿಕೊಳ್ಳಲ್ಲ. ಇವರಿಗೆಲ್ಲ ಬೇರೆ ಬೇರೆ ದೇಶದ ಬೆಂಬಲವಿದ್ದು, ಉಗ್ರರನ್ನ ಕರೆಸಿ ರೈತರ ಹೆಸರಿಟ್ಟು ಭಯೋತ್ಪಾದನೆ ಮಾಡಿಸುತ್ತಿದ್ದಾರೆ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.  ಹಾಗೆಯೇ ಇದಕ್ಕೆ  ಕಾಂಗ್ರೆಸ್‌ನವರು ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Key words: They are- not farmers- terrorists-Minister BC Patil