ಕೃಷಿ ತಿದ್ದುಪಡಿ ಕಾಯ್ದೆಗೆ ವಿರೋಧ: ಮೈಸೂರಿನಲ್ಲಿ  ರೈತರಿಂದ ರಸ್ತೆ ತಡೆ: ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ…

ಮೈಸೂರು,ಫೆಬ್ರವರಿ,6,2021(www.justkannada.in):  ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ಗೆ ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಅನ್ನದಾತರು ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆ ಚಳಿವಳಿ ನಡೆಸುತ್ತಿದ್ದು, ಈ ನಡುವೆ ಮೈಸೂರಿನಲ್ಲಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.jk

ರೈತ ಮುಖಂಡ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ  ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದು, ರಾಷ್ಟ್ರ ಧ್ವಜ ಹಾಗೂ ಹಸಿರು ಧ್ವಜ ಹಿಡಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ನಗರದ ಕೊಲಂಬಿಯಾ ಏಷಿಯಾ ಸಿಗ್ನಲ್ ಬಳಿಯ ನಾಲ್ಕು ರಸ್ತೆಗಳು ಬಂದ್ ಆಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿ ಬಿಕೋ ಎನ್ನುತ್ತಿದೆ. ಇನ್ನು ರೈತರ ಪ್ರತಿಭಟನೆಗೆ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಸಾಥ್ ನೀಡಿವೆ.

ಹಳ್ಳಿಗಳಿಂದ ಎತ್ತಿನಗಾಡಿಗಳ ಮೂಲಕ ರೈತರು ಪ್ರತಿಭಟನೆಗೆ ಆಗಮಿಸಿದ್ದು,  ರಿಂಗ್ ರಸ್ತೆಯ ಬಂಡೀಪಾಳ್ಯ ವೃತ್ತದಲ್ಲಿ ರೈತರ ಜಮಾವಣೆಗೊಂಡಿದ್ದಾರೆ. ಸಾಕಿದ ದನಕರುಗಳು, ಕುರಿಮರಿಗಳೊಂದಿಗೆ ರಸ್ತೆಯಲ್ಲೇ ರೈತರು ಠಿಕಾಣಿ ಹೂಡಿದ್ದು, ಮಾನವ ಸರಪಳಿ ನಿರ್ಮಿಸಿ ರಸ್ತೆಯಲ್ಲೇ ಮಲಗಿ  ಪ್ರತಿಭಟನೆ ನಡಸುತ್ತಿದ್ದಾರೆ.

opposition-agricultural-amendment-act-road-block-farmers-mysore
ಕೃಪೆ- internet

ಇನ್ನು ರೈತರೊಬ್ಬರು ಕಬ್ಬಿಣದ ಸರಪಳಿ ಬಿಗಿದುಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದು  ಪ್ರತಿಭಟನೆ ವೃತ್ತದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.  ಸ್ಥಳದಲ್ಲಿ ರೈತರಿಗಿಂತ ಪೊಲೀಸರೇ ಹೆಚ್ಚಾಗಿ ಬಿಗಿ ಬಂದೋಬಸ್ತ್ ನಲ್ಲಿದ್ಧಾರೆ.

ENGLISH SUMMARY…

Protest against Union Govt.’s farm policies: Road block in Mysuru
Mysuru, Feb. 6, 2021 (www.justkannada.in): Farmers are protesting against the Govt. of India’s amended farm policies by blocking the National and State highways, across the country. Farmers in Mysuru also took out a protest march in the city.
The farmers, led by their leader Badagalapura Nagendra took out a protest march shouting slogans against the Union Government. The protestors held the National flag and Green flag during their protest march.road-block-protest-mysore-farmers-badagalapura-nagendra-detained
All the four roads that meet at the Columbia Asia Hospital junction, which usually were busy, today wore a deserted look, as a result of the protest. The ever-busy Mysuru-Bengaluru highway also wore a deserted look.
Keywords: Protest march in Mysore/ highways wear a deserted look/ farmers protest

Key words: Opposition – Agricultural Amendment Act-Road block – farmers -Mysore