Monday, September 21, 2026

BDA Apartments

Home Front Page ನಾವು ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿಲ್ಲ, ಅವರೇ ಬರುತ್ತಿದ್ದಾರೆ- ಸಿಎಂ ಬೊಮ್ಮಾಯಿಗೆ ಡಿ.ಕೆ ಶಿವಕುಮಾರ್ ತಿರುಗೇಟು.

ನಾವು ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿಲ್ಲ, ಅವರೇ ಬರುತ್ತಿದ್ದಾರೆ- ಸಿಎಂ ಬೊಮ್ಮಾಯಿಗೆ ಡಿ.ಕೆ ಶಿವಕುಮಾರ್ ತಿರುಗೇಟು.

ಬೆಂಗಳೂರು,ಮಾರ್ಚ್,29,2023(www.justkannada.in): ಡಿ.ಕೆ ಶಿವಕುಮಾರ್ ಕರೆ ಮಾಡಿ ನಮ್ಮ ಶಾಸಕರನ್ನ ಕರೆಯುತ್ತಿದ್ದಾರೆ ಎಂದು ಆರೋಪಿಸಿದ್ಧ ಸಿಎಂ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ನಾವು ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿಲ್ಲ. ಬಿಜೆಪಿ ಶಾಸಕರೇ ಬರುತ್ತಿದ್ದಾರೆ. ಬಿಜೆಪಿಯಿಂದ ಬರುವವರಿಗೆ ಸ್ಥಾನಮಾನ ಕೊಡಲು ಆಗುತ್ತಿಲ್ಲ. ಹೀಗಾಗಿ ಸುಮ್ಮನಿದ್ದೇವೆ ಎಂದು ಹೇಳಿದರು.ನಾವು ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿಲ್ಲ dks

ಇವತ್ತಿನಿಂದಲೇ ಬಿಜೆಪಿ ಸರ್ಕಾರದ ಕೊನೆ ಕ್ಷಣ. ಬಿಜೆಪಿ ಈ ಬಾರಿ 60ರಿಂದ 65 ಸೀಟ್ ಬರುತ್ತೆ ಅಷ್ಟೆ. ಬಿಜೆಪಿ ಹೇಗೆ ಸರ್ಕಾರ ಮಾಡಿದ್ರು . ನಮ್ಮ ಶಾಸಕರರನ್ನ ಕರೆದೊಯ್ದು ಸರ್ಕಾರ ರಚನೆ ಮಾಡಿದರು. ಇದು ಬಿಜೆಪಿ ಸರ್ಕಾರ ಅಲ್ಲ ಸಮ್ಮಿಶ್ರ ಸರ್ಕಾರ. ಸಿಎಂ ಬೊಮ್ಮಾಯಿ ಮೊದಲು ಯಾವ ಪಕ್ಷದಲ್ಲಿದ್ದರು. ಬೊಮ್ಮಾಯಿ ಜೆಡಿಎಸ್ ನಲ್ಲಿದ್ದರು ಎಂದು ಕಿಡಿಕಾರಿದರು.

Key words: not -contacted -BJP MLAs- DK Shivakumar – CM Bommai.