ವ್ಯಾಪಕ ಅನಾರೋಗ್ಯ, ಸಾವು ನೋವುಂಟು ಮಾಡುವ ಸಾಮರ್ಥ್ಯ ಕೆಲವು ರೋಗಾಣುಗಳಿಗಷ್ಟೆ ಇವೆ-ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮೇ,6,2022(www.justkannada.in):  ಕಡಿಮೆ ಸಂಖ್ಯೆಯ ಜೀವಾಣುಗಳು ವ್ಯಾಪಕವಾದ ಅನಾರೋಗ್ಯ ಅಥವಾ ಸಾವುನೋವುಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜೀವರಸಾಯನ ಶಾಸ್ತ್ರ ವಿಭಾಗದ ವತಿಯಿಂದ ‘ಜೀವಾಣು ಮತ್ತು ಜೈವಿಕ ಅಣು’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಟಾಕ್ಸಿನ್ ಎಂಬ ಪದವು ಕಚ್ಚುವಿಕೆ, ಕುಟುಕು, ಇತ್ಯಾದಿಗಳ ಮೂಲಕ ಹರಡುವ ವಿಷ. ಇದು ವಿಷ ಮತ್ತು ವಿಷಕಾರಿ ಎರಡನ್ನೂ ಒಳಗೊಂಡಿದೆ. ಇದು ಯಾವುದೇ ವಿಧಾನದಿಂದ ದೇಹವನ್ನು ಪ್ರವೇಶಿಸಬಹುದು. ವಿಶೇಷವಾಗಿ ಇನ್ಹಲೇಷನ್ ನಿಂದಲೂ ಸೇರಬಹುದು. ಇದರೊಂದಿಗೆ ಎಕ್ಸೋಟಾಕ್ಸಿನ್, ಎಂಡೋಟಾಕ್ಸಿನ್‌ ಗಳು ಎಂದು ವರ್ಗೀಕರಿಸಬಹುದು. ಹೆಮೋಟಾಕ್ಸಿನ್ ಕೆಂಪು ರಕ್ತ ಕಣಗಳ ನಾಶಕ್ಕೆ ಕಾರಣವಾಗುತ್ತದೆ. ಹೆಪಟೊಟಾಕ್ಸಿನ್ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ನ್ಯೂರೋಟಾಕ್ಸಿನ್ ಗಳು ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದರು.

ಅಮೆರಿಕಾರದ ಜೀವವಿಜ್ಞಾನ ಶಾಸದ ಪ್ರೊ.ಜೈ ಡಬ್ಲ್ಯೂ ರಾಕ್ಸ್ ಮಾತನಾಡಿದರು. ಮೈವಿವಿ ಕುಲಸಚಿವ ಪ್ರೊಘಿ.ಆರ್.ಶಿವಪ್ಪ, ಜೀವರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಕೆ.ಕೆಂಪರಾಜು, ಅಣು ಜೀವಶಾಸ್ತ್ರ ವಿಭಾಗದ ಪ್ರೊ.ಗೋಪಾಲ್ ಮರಾಥೆ ಕೆ. ಸೇರಿದಂತೆ ಇತರರು ಇದ್ದರು.

Key words: National-Symposium – Toxins – Biomolecules-mysore university-VC

ENGLISH SUMMARY….

Very less number of toxins have capability to cause disease and fatalities: Prof. G. Hemanth Kumar
Mysuru, May 6, 2022 (www.justkannada.in): “A very few number of toxins have the capability to cause diseases and fatalities,” opined Prof. G. Hemanth Kumar, Vice-Chancellor, University of Mysore.
He participated in a national seminar on the topic, “Cells and bio molecules,” organized by the Department of Chemistry, University of Mysore, held at the Rani Bahaddur Auditorium in Manasa Gangotri campus. “Toxins are those particles that have the characteristics of spreading poison through biting and stinging. Toxins have poisonous characteristics. They can enter our body in any way, especially through inhalation. They can be bifurcated as Exotoxins, and Endotoxins. While the Hemotoxins destroy the Red Blood Cells, the Hepotoxins will affect the liver. The Neurotoxins affect the nervous system,” he explained.
American Biomedical Science Prof. J.W. Rocks spoke on the occasion. Prof. R. Shivappa, Registrar (Exams), University of Mysore, Prof. K. Kemparaju, Chairman, Department of Biochemistry, Prof. Gopal Marathe K., Department of Atomic Chemistry and others were present on the occasion.
Keywords: University of Mysore/ toxins/ seminar/ Prof. G. Hemanth Kumar