ಬಸವ ವಿಗ್ರಹ ಕಂಡ ಬಂದ ಹಿನ್ನೆಲೆ: ಅರಸನಕೆರೆ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದ ರಾಜವಂಶಸ್ಥ ಯದುವೀರ್…

ಮೈಸೂರು,ಜು,19,2019(www.justkannada.in):  ಜಿಲ್ಲೆಯ ಅರಸನ ಕೆರೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬೃಹತ್ ನಂದಿ ವಿಗ್ರಹಗಳು ಪತ್ತೆಯಾಗಿತ್ತು. ಇದೀಗ  ಅದೇ ಗ್ರಾಮಕ್ಕೆ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖುದ್ದು ಭೇಟಿ ನೀಡಿ ನಂದಿ ವಿಗ್ರಹಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಖುದ್ದು ವಿಗ್ರಹದ ಬಗ್ಗೆ ಮಾಹಿತಿ ಪಡೆಯಲು ಮುಂದಾದ ರಾಜವಂಶಸ್ಥ ಯದುವೀರ್ ಅವರು, ಬೆಳ್ಳಂಬೆಳಿಗ್ಗೆ ಅರಸನಕೆರೆ ಗ್ರಾಮಕ್ಕೆ ಪುರಾತತ್ವ ತಜ್ಞ ಡಾ.ರಂಗರಾಜು ಜೊತೆ ಭೇಟಿ ನೀಡಿದರು.  ಗ್ರಾಮದಲ್ಲಿ ಒಂದು ಸುತ್ತು ಓಡಾಟ ನಡೆಸಿದ ಯದುವೀರ್ ಅವರು ಗ್ರಾಮದ ಮುಖಂಡರೋಂದಿಗೆ ಮಾತುಕತೆ  ನಡೆಸಿದರು.

ಗ್ರಾಮಸ್ಥರಿಂದ ಹಾಗೂ ಪುರಾತತ್ವ ತಜ್ಞರಿಂದ ಸಂಪೂರ್ಣ ಮಾಹಿತಿ ಪಡೆದರು.  ಮೈಸೂರು-ಎಚ್.ಡಿ.ಕೋಟೆ ಮಾರ್ಗದ ಜಯಪುರ ಬಳಿಯ ಅರಸನಕೆರೆ ಗ್ರಾಮದಲ್ಲಿ ಬೃಹತ್ ನಂದಿ ವಿಗ್ರಹಗಳು ಮಣ್ಣಿನಲ್ಲಿ ಹುದುಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಜಿಲ್ಲಾಡಳಿತ ವಿಗ್ರಹಗಳ ಸಂರಕ್ಷಣೆಗೆ ಮುಂದಾಗಿತ್ತು.

Key words: nandi statue- yaduveer- visit-arasinkere-villege-information