ಮೈಸೂರು, ಮಂಗಳೂರು ನೇರ ವಿಮಾನ ಯಾನ : ಅಂಚೆ ಇಲಾಖೆ “Flight Carried Special Cover” ರವಾನೆ ಯಶಸ್ವಿ

Promotion

ಮೈಸೂರು,ಡಿಸೆಂಬರ್,12,2020(www.justkannada.in) : ಮೈಸೂರು ಮತ್ತು ಮಂಗಳೂರು ನಡುವೆ ನೇರ ವಿಮಾನ ಯಾನ ಸೇವೆಯು ಡಿ.11ರಂದು ಆರಂಭಗೊಂಡಿದ್ದು, ಈ ಸಂದರ್ಭ ಅಂಚೆ ಇಲಾಖೆಯಿಂದ “Flight Carried Special Cover” ಅನ್ನು ಮೈಸೂರು ಮತ್ತು ಮಂಗಳೂರು ನಿಂದ ರವಾನಿಸುವ ವ್ಯವಸ್ಥೆಮಾಡಲಾಗಿತ್ತು.

logo-justkannada-mysore

ಇದರ ಅಂಗವಾಗಿ ASP ರಾಜುಕಾಳೇಶ್ವರ್ ರವರು ಮೊದಲ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಸಿ, ಮೈಸೂರು ಅಂಚೆ ವಿಭಾಗದ ವಿಶೇಷ ಲಕೋಟೆಯನ್ನು ಮಂಗಳೂರು ಅಂಚೆ ವಿಭಾಗಕ್ಕೆ ತಲುಪಿಸಿ,  ಮಂಗಳೂರು ಅಂಚೆ ವಿಭಾಗದ ವಿಶೇಷ ಲಕೋಟೆಯನ್ನು ಮೈಸೂರಿಗೆ ತಂದಿರುತ್ತಾರೆ. ಎರಡೂ ಕಡೆಯಿಂದ ಪ್ರಯಾಣದ ಅವಧಿ ಕೇವಲ ಮೂರು ಘಂಟೆಗಳಾಗಿದೆ.

ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎ.ಕೆ.ನಾಯ್ಕ್ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ ಹಾಗೂ Air Alliance CEO ಹರ್ ಪ್ರೀತ್ ಸಿಂಗ್ ಅವರೊಂದಿಗೆ ASP ರಾಜುಕಾಳೇಶ್ವರ್ ಅವರಿಗೆ ವಿಶೇಷ ಲಕೋಟೆಯುಳ್ಳ ಬ್ಯಾಗನ್ನು ಹಸ್ತಾಂತರಿಸಿ ಲಕೋಟೆಯ ವಿಶೇಷತೆಯನ್ನು ವಿವರಿಸಿದರು.

Mysore-Mangalore-Direct-Flights-Postal-Department-Flight-Carried-Special-Cover-Transmission- Successful

Air Alliance CEO  ಹರ್ ಪ್ರೀತ್ ಸಿಂಗ್ ಅವರು ರಾಜುಕಾಳೇಶ್ವರ್ ರವರಿಗೆ Boarding Pass ಅನ್ನು ಹಸ್ತಾಂತರಿಸಿದರು.

ಈ ವಿಶೇಷ ಲಕೋಟೆಗಳು ಮೈಸೂರು ಮತ್ತು ಮಂಗಳೂರು ದಿನಾಂಕ ಮುದ್ರೆಗಳಲ್ಲದೆ (Pictorial Cancelation ಸಹ) ASP ರಾಜುಕಾಳೇಶ್ವರ್ ರವರ ಸಹಿಯನ್ನು ಹೊಂದಿತ್ತು ಎಂದು ತಿಳಿದು ಬಂದಿದ್ದು,  ಮೈಸೂರು ಪ್ರದಾನ ಅಂಚೆ ಕಛೇರಿಯ Philately Bureau ದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ತಿಳಿಸಲಾಗಿದೆ.

Mysore-Mangalore-Direct-Flights-Postal-Department-Flight-Carried-Special-Cover-Transmission- Successful

key words : Mysore-Mangalore-Direct-Flights-Postal-Department-Flight-Carried-Special-Cover-Transmission- Successful