ಡಾ.ಶೋಭಿತ್ ರಂಗಪ್ಪ ಅವರಿಗೆ ‘ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇಷನ್’ ಗೌರವ…

ಬೆಂಗಳೂರು,ಡಿಸೆಂಬರ್,12,2020(www.justkannada.in): ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಡಾ.ಶೋಭಿತ್ ರಂಗಪ್ಪ ಅವರಿಗೆ ‘ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇಷನ್(ARP)’  ಅನ್ನು ನೀಡಿ ಗೌರವಿಸಲಾಗಿದೆ.award-for-research-publication-award-faculty-member-of-adichunchanagiri-university-dr-shobhit-rangappa

ಈ ಪ್ರಶಸ್ತಿಯನ್ನು ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ, ಕರ್ನಾಟಕ ಸರ್ಕಾರ ವತಿಯಿಂದ ವಿಜ್ಞಾನ ಸಂಶೋಧನೆಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ವಿಜ್ಞಾನಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯ ಆಯ್ಕೆ ಪ್ರೊ. ಸಿ.ಎನ್.ಆರ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ.ಶೋಭಿತ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅತ್ಯುತ್ತಮವಾಗಿ ವಿಜ್ಞಾನ ಸಂಶೋಧನೆ ನಡೆಸಿರುತ್ತಿರುವ ವಿಜ್ಞಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ವರ್ಷದ ಪ್ರಶಸ್ತಿಯನ್ನು ಪಡೆದ ಡಾ.ಶೋಭಿತ್ ರವರು ಹೊಡೆಕೊ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.

ಪ್ರಸ್ತುತ ಶೋಭಿತ್ ಅವರು ಆದಿಚುಂಚನಗಿರಿ ಇನ್ಸ್‍ಟಿಟ್ಯೂಟ್ ಫಾರ್ ಮಾಲಿಕ್ಯುಲಾರ್ ಮೆಡಿಸಿನ್, ಆದಿಚುಂಚನಗಿರಿ ವಿಶ್ವವಿದ್ಯಾನಿಲಯದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಈವರೆಗೆ 60 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಹಾಗೂ 05 ಪೇಟೆಂಟ್‍ಗಳನ್ನು ಕ್ಯಾನ್ಸರ್ ಔಷಧೀಯ ಗುಣಗಳುಳ್ಳ ರಾಸಾಯನಿಕಗಳ ಉತ್ಪಾದನೆಗೆ ಪಡೆದುಕೊಂಡಿರುತ್ತಾರೆ. ಡಾ.ಶೋಭಿತ್ ಅವರಿಗೆ 2019ನೇ ಸಾಲಿನಲ್ಲಿ ಪ್ರೊ. ಆರ್.ಸಿ.ಶಾ ಮೆಮೋರಿಯಲ್ ಪ್ರಶಸ್ತಿಯು ಭಾರತೀಯ ವಿಜ್ಞಾನ ಕಾಂಗ್ರೆಸ್ ವತಿಯಿಂದ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary…

The faculty member of Adichunchanagiri University Dr.Shobith Rangappa has been honoured with “Award for Research Publication (ARP)”. This award is conferred by “Vision Group On Science and Technology” Government of Karnataka. This award is given in recognition of the scientific research contribution in the previous year. ARP is instituted by VGST, Govt. of Karnataka to nourish science research in the state of Karnataka. The award selection committee was chaired by Bharath Ratna Prof. C.N.R Rao, Dr.Shobith obtained his Ph.D from Hokkaido University Japan and currently he serving as a Director of Adichunchanagiri Institute for Molecular Medicine, Adichunchanagiri University, B.G.Nagar, Mandya District. He has published over 60 research papers and holding five patents in the area of cancer therapeutics and drug discovery. If may be noted that he was awarded with Prof. R.C.Shah memorial award in the year 2019 by Indian Science Congress Association in Recognition of his scientific merit.

Key words: Award for Research Publication- Award – faculty- member of Adichunchanagiri University- Dr. Shobhit Rangappa