ಸೂಪರ್ ಸ್ಟಾರ್ ರಜನಿಕಾಂತ್ 70ನೇ ಹುಟ್ಟುಹಬ್ಬ : ಬಿಜೆಪಿ ನಾಯಕರಿಂದ ಶುಭಾಶಯ

ಬೆಂಗಳೂರು,ಡಿಸೆಂಬರ್,12,2020(www.justkannada.in) : ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ 70ನೇ ವರ್ಷದ ಜನ್ಮದಿನಕ್ಕೆ ಸಚಿವರಾದ ಡಾ.ಕೆ.ಸುಧಾಕರ್,ಶ್ರೀರಾಮುಲು ಶುಭಾಶಯ ಕೋರಿದ್ದರೆ.logo-justkannada-mysoreಕರುನಾಡ ಮಣ್ಣಲ್ಲಿ ಹುಟ್ಟಿ, ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ನಟನಾ ಶೈಲಿಯಿಂದ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಗುರು ರಾಯರು ತಮಗೆ ಉತ್ತಮ ಆರೋಗ್ಯ ಕರುಣಿಸಿ ಇನ್ನಷ್ಟು ಯಶಸ್ಸು, ಕೀರ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕನ್ನಡ ನಾಡಿನ ಮಗನೊಬ್ಬ ಇಂದು ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ವರ್ಗವನ್ನೇ ಸಂಪಾದಿಸಿರುವ ಜನಪ್ರಿಯ ನಟ. ಸಾಧನೆ ಶಿಖರವೇರಿ, ಸಾಧನೆಯ ಹಸಿವಿರುವವರಿಗೆ ಮಾದರಿಯಾಗಿ ನಿಂತ ನಟ ರಜನಿಕಾಂತ್ ಅವರ ಜನ್ಮದಿನವಿಂದು.

ಸಿನಿಮಾ ಅಷ್ಟೇ ಅಲ್ಲದೇ ಜನಸೇವೆಯಲ್ಲೂ ತೊಡಗಿರುವ ನಿಜವಾದ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

Superstar,Rajinikanth's,70th Birthday,Greetings,BJP,leaders

key words : Superstar-Rajinikanth’s-70th Birthday-Greetings-BJP-leaders