ಮೈಸೂರು: ಬೇರೊಬ್ಬರ ಜತೆ ನಿಶ್ಚಿತಾರ್ಥವಾಗಿದ್ದ ಯುವತಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣು…

Promotion

ಮೈಸೂರು,ಫೆ,13,2020(www.justkannada.in):  ಪ್ರಿಯಕರನ ಕಿರುಕುಳಕ್ಕೆ ಬೇಸತ್ತ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮೆಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ. ಮೇಘನಾ(20) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಯುವತಿ. ಪ್ರಿಯಕರ ಮಣಿಕಂಠ  ಜತೆ ಮೇಘನಾ  ವಿವಾಹಕ್ಕೆ  ಮಾಡಲು ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಬೇರಬ್ಬ ಹುಡಗನ ಜತೆ ಯುವತಿ ಮೇಘನಾ ನಿಶ್ಚಿತಾರ್ಥವಾಗಿತ್ತು.

ಆದರೆ ಮೇಘನಾ ಭಾವಿ ಪತಿಗೆ ಪ್ರಿಯಕರ ಮಣಿಕಂಠ ಪ್ರೀತಿಯ ವಿಷಯ ತಿಳಿಸಿದ್ದ ಅಲ್ಲದೇ ತಾವು ಒಟ್ಟಿಗಿದ್ದ ಫೋಟೋವನ್ನ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ಮೇಘನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಮೇಘನಾ ಆತ್ಮಹತ್ಯೆ ಬಳಿಕ ಪ್ರಿಯಕರ ಮಣಿಕಂಠ ನಾಪತ್ತೆಯಾಗಿದ್ದು ಯುವತಿ ಮೇಘನಾ ತಂದೆ ಮಹದೇವಯ್ಯ ನೀಡಿದ ದೂರಿನ ಅನ್ವಯ ಮಣಿಕಂಠ ವಿರುದ್ದ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore-Young woman -lover -harassment – suicide.