ಮೈಸೂರಿನಲ್ಲೊಂದು ಅಚ್ಚರಿ: ಬೋರ್ ವೆಲ್ ನಲ್ಲಿ ಬರ್ತಿದೆ ಪೆಟ್ರೋಲ್ ಮಿಶ್ರಿತ ನೀರು…

Promotion

ಮೈಸೂರು,ಫೆ,23,2020(www.justkannada.in): ಇತ್ತೀಚೆಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಚಿನ್ನದ ಗಣಿ ವದಂತಿ ಹಬ್ಬಿತ್ತು. ಈ ಬೆನ್ನಲೇ ಇದೀಗ ಮೈಸೂರಿನಲ್ಲೂ ಪೆಟ್ರೋಲ್ ನಿಕ್ಷೇಪ ವದಂತಿ ಕೇಳಿ ಬಂದಿದೆ.

ಹೌದು, ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಮೈಸೂರಿನ ಸಿದ್ದಲಿಂಗಪುರದಲ್ಲಿ ಮನೆಯೊಂದರ ಬೋರ್‌ ವೆಲ್ ನಲ್ಲಿ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿದೆ. ಬೆಂಗಳೂರು ಮೂಲಕದ ಪ್ರಕಾಶ್ ಹಾಗೂ ಭವಾನಿ ದಂಪತಿ ಮಾಲೀಕತ್ವದ ಮನೆಯಲ್ಲಿ ಈ  ವಿಚಿತ್ರ ಘಟನೆ ನಡೆದಿದೆ.

ಪ್ರಕಾಶ್ ಭವಾನಿ ದಂಪತಿ ಒಂದೇ ಕಟ್ಟಡದಲ್ಲಿ 4 ಮನೆ ಕಟ್ಟಿಸಿ ಬಾಡಿಗೆಗೆ ‌ನೀಡಿದ್ದು, 5 ವರ್ಷದ ಹಿಂದೆ ಬೋರ್ ವೆಲ್ ತೆಗೆಸಿದ್ದರು. ಈ ನಡುವೆ  ಕಳೆದ ಒಂದು ತಿಂಗಳಿಂದ ಬೋರ್ ವೆಲ್ ನೀರಿನಲ್ಲಿ ಪೆಟ್ರೋಲ್ ವಾಸನೆ ಬರುತ್ತಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಈಗ ನೀರಿಗೆ ಬೆಂಕಿ ಹಚ್ಚಿದರೆ ನೀರು ಹತ್ತಿಕೊಳ್ಳುತ್ತಿದ್ದು ನೀರನ್ನ ಕೆಳಗೆ ಚೆಲ್ಲಿ ಬೆಂಕಿ ಹಚ್ಚಿದರೇ ಹೊತ್ತಿ ಉರಿಯುತ್ತಿದೆ. ಇದನ್ನ ನೋಡಿ ಎಲ್ಲರೂ ನಿಬ್ಬೆರಗಾಗಿದ್ದು ಪೆಟ್ರೋಲ್ ನಿಕ್ಷೇಪವಿದೆಯೇ ಎಂಬ ವದಂತಿ ಹಬ್ಬಿದೆ.

Key words: Mysore –wonder-Borewell –petrol- mixed -water