62ನೇ ಮನ್ ಕೀ ಬಾತ್ : ಇಸ್ರೋ ವಿಜ್ಞಾನಿಗಳ ಸಾಧನೆ ಬಗ್ಗೆ ಪ್ರಶಂಸೆ: ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆಯನ್ನ ಶ್ಲಾಘಿಸಿದ ಪ್ರಧಾನಿ ಮೋದಿ….

ನವದೆಹಲಿ,ಫೆ,23,2020(www.justkannada.in):  ಇಸ್ರೋ ವಿಜ್ಞಾನಿಗಳು ಯುವಕರಿಗೆ ಆದರ್ಶವಾಗಿದ್ದಾರೆ.  ಪ್ರೇರಕ ಶಕ್ತಿಯಾಗಿದ್ದಾರೆ ಅವರ ಸಾಧನೆ ಯುವಕರನ್ನ ವಿಜ್ಷಾನದತ್ತ ಸೆಳೆಯುತ್ತಿದೆ ಎಂದು ಇಸ್ರೋ ವಿಜ್ಞಾನಿಗಳ ಸಾಧನೆಯನ್ನ ಪ್ರಧಾನಿ ಮೋದಿ ಪ್ರಶಂಸಿಸಿದರು.

ಇಂದಿನ 62ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುವಕರಿಗೆ ಇಸ್ರೋ ವಿಜ್ಞಾನಿಗಳು ಆದರ್ಶವಾಗಿದ್ದಾರೆ. ಪ್ರೇರಕ ಶಕ್ತಿಯಾಗಿದ್ದಾರೆ. ಅವರ ಸಾಧನೆ ಯುವಕರನ್ನು ವಿಜ್ಞಾನದತ್ತ ಸೆಳೆಯುತ್ತಿದೆ. ಬೆಂಗಳೂರಿನ ಇಸ್ರೋಗೆ ನಾನು ಭೇಟಿ ನೀಡಿದ್ದ ವೇಳೆ ಇದನ್ನು ಗಮನಿಸಿದ್ದೇನೆ ಎಂದು ನುಡಿದರು.

ಇದೇ ವೇಳೆ ದೇಶದ ಅಭಿವೃದ್ದಿಗೆ ಮಹಿಳೆಯರ ಕೊಡುಗೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಹೆಚ್ಚಾಗುತ್ತಿದೆ. ಅಭಿವೃದ್ಧಿಯಲ್ಲಿ ಮಹಿಳೆಯರು ಕೈಜೋಡಿಸುತ್ತಿದ್ದಾರೆ. ಪ್ರತಿ ಹಳ್ಳಿಯ ಮಹಿಳೆಯೂ ಕೂಡ ಕೈಜೋಡಿಸಿದ್ದು, ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಉದ್ಯಮ ಆರಂಭಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ತಿಂಗಳು ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ಮಕ್ಕಳಿಗೆ ಶುಭ ಹಾರೈಕೆಗಳು. ನಮ್ಮ ದೇಶದ ಜೀವವೈವಿಧ್ಯತೆ ಇಡೀ ಮಾನವ ಜನಾಂಗಕ್ಕೆ ಮೌಲ್ಯವಾದ ಸಂಪತ್ತಾಗಿದೆ. ಅವುಗಳನ್ನು ಸಂರಕ್ಷಿಸಿ ಹೊರಜಗತ್ತಿಗೆ ತೋರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

Key words: 62nd Man ki Bath-achievement – ISRO –scientists- Prime Minister- Modi