ಪತ್ನಿ ಕೊಲೆಗೈದು ಬಳಿಕ ದಂತವೈದ್ಯ ಆತ್ಮಹತ್ಯೆ ಪ್ರಕರಣ: ಪ್ರಿಯಕರನ ಸುಸೈಡ್ ವಿಚಾರ ತಿಳಿದು ಪ್ರಿಯತಮೆಯೂ ನೇಣಿಗೆ ಶರಣು…..

ಬೆಂಗಳೂರು,ಫೆ,23,2020(www.justkannada.in):  ಚಿಕ್ಕಮಗಳೂರು ಜಿಲ್ಲೆ  ಕಡೂರು ತಾಲ್ಲೂಕಿನ ಗೃಹಿಣಿ ಕವಿತ ಬರ್ಬರ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ದಂತವೈದ್ಯ ರೇವಂತ್ ಕವಿತಾ ಅವರನ್ನ ಕೊಲೆ ಮಾಡಿ ಬಳಿಕ ಬಂಧನ ಭೀತಿಯಿಂದ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೆಬ್ರವರಿ 17ರಂದು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಲಕ್ಷ್ಮೇಶ್ವರ ನಗರದಲ್ಲಿ ಪತ್ನಿ ಕವಿತಾಳನ್ನು ಕತ್ತು ಸೀಳಿ ಬರ್ಬರವಾಗಿ ಕೊಂದು ಬಳಿಕ ಇದನ್ನ ರೇವಂತ್ ದರೋಡೆಕೋರರ ಕೃತ್ಯವೆಂದು ಬಿಂಬಿಸಲು ಪ್ರಯತ್ನಿಸಿದ್ದರು.  ಆದರೆ, ಪೊಲೀಸರ ತನಿಖೆ ವೇಳೆ ಸಿಕ್ಕಿಬೀಳುವ ಆತಂಕದಿಂದ ರೇವಂತ್ ನಿನ್ನೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಪ್ರಿಯಕರ ರೇವಂತ್ ಆತ್ಮಹತ್ಯೆ ಶರಣಾದ ಸುದ್ದಿ ತಿಳಿದ  ಹರ್ಷಿತ (32) ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಏನಿದು ಪ್ರಕರಣ…

ದಂತವೈದ್ಯ ಡಾ.ರೇವಂತ್ ಗೆ  ಹಾಗೂ ಹರ್ಷಿತಾ ನಡುವೆ ಅನೈತಿಕ ಸಂಬಂಧವಿತ್ತು. ಹರ್ಷಿತಾಗೆ ಮದುವೆಯಾಗಿದ್ದು ಪತಿ ಬಿಎಂಟಿಸಿ ಚಾಲಕರಾಗಿದ್ದಾರೆ ಜತೆಗೆ ಇವರಿಗೆ ಒಬ್ಬ ಮಗಳಿದ್ದಾಳೆ.  ಇನ್ನು ರೇವಂತ್ ಹಾಗೂ ಕವಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ.

ಈ ನಡುವೆ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದ ಹರ್ಷಿತಾ ಜತೆ ರೇವಂತ್ ಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಪತಿಯ ಅಕ್ರಮ ಸಂಬಂಧ ಬಗ್ಗೆ ಕವಿತಾ ಆಗಾಗ ಆಕ್ಷೇಪವೆತ್ತುತ್ತಿದ್ದು ಈ ವಿಚಾರಕ್ಕೆ ಪತಿ-ಪತ್ನಿ ಮಧ್ಯೆ ಜಗಳ ನಡೆಯುತ್ತಿತ್ತು. ಇದರಿಂದಾಗಿ ರೇವಂತ್ ತನ್ನ ಪತ್ನಿ ಕವಿತಾರನ್ನ ಹತ್ಯೆಗೈದು ದರೋಡೆ ಪ್ರಕರಣ ಎಂದು ಬಿಂಬಿಸಲು ಯತ್ನಿಸಿದ್ದರು.

ಆದರೆ ಪೊಲೀಸ್ ತನಿಖೆ ವೇಳೆ ಸತ್ಯಾಂಶ ಹೊರಬಂದು ಬಂಧನವಾಗುವ ಆತಂಕದಿಂದ ರೇವಂತ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.  ಇದಾದ ಬಳಿಕ ರೇವಂತ್ ಆತ್ಮಹತ್ಯೆ ಸುದ್ದಿ ತಿಳಿದು ಪ್ರಿಯತಮೆ ಹರ್ಷಿತಾ ಕೂಡ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ವಿರುದ್ದ ಡೆತ್ ನೋಟ್…

ಈ ನಡುವೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ನೇಣಿಗೆ ಶರಣಾಗಿರುವ ಹರ್ಷಿತ ತನ್ನ ಪತಿ ಸುದೀಂದ್ರ ವಿರುದ್ದ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿದ್ದಾರೆ. ಡೆತ್ ನೋಟ್ ನಲ್ಲಿ ಪತಿ ಸುದೀಂದ್ರ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಕಿರುಕುಳ ನೀಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words:  dentist -suicide -case – wife – murder- Lover- Bangalore-chikamagalore