ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹ: ಕಾಡಾ ಕಚೇರಿಗೆ ಮುತ್ತಿಗೆ ಹಾಕಲು  ರೈತರಿಂದ ಯತ್ನ….

ಮೈಸೂರು,ಫೆ,18,2020(www.justkannada.in): ಬೇಸಿಗೆ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಕಾವೇರಿ ಹಾಗೂ ಕಬಿನಿ ಅಚ್ಚುಕಟ್ಟು‌ ನಾಲೆಗಳಿಗೆ ನೀರು ಹರಿಸುವಂತೆ ರಾಜ್ಯ ಕಬ್ಬುಬೆಳೆಗಾರರ ಸಂಘದಿಂದ ಒತ್ತಾಯ ಮಾಡುತ್ತಿದ್ದಯ  ಕಾವೇರಿ ಹಾಗೂ ಕಬಿನಿ ನಿರಾವರಿ ನಿಗಮದ ಅಧಿಕಾರಿಗಳ ವಿರುದ್ಧ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ನಾಲೆಗಳಿಗೆ ನೀರು ಬೀಡುವಂತೆ ಫೆಬ್ರವರಿ 4 ರಂದು ನೀರಾವರಿ ಅಧಿಕಾರಿಗಳಿಗೆ ಕುರುಬೂರು ಶಾಂತಕುಮಾರ್ ಮನವಿ ಸಲ್ಲಿಸಿದ್ದರು. ಈ ನಡುವೆ ಕಬಿನಿ ಜಲಾಶಯದ ಎಡದಂಡೆ, ಬಲದಂಡೆ ನಾಲೆ, ರಾಂಪುರ ನಾಲೆ, ಹುಲ್ಲಹಳ್ಳಿ ನಾಲೆ. ವರುಣಾ ನಾಲೆ, ಚಿಕ್ಕದೇವರಾಜ ನಾಲೆ. ವಿಸಿ ನಾಲೆಗಳಿಗೆ ನೀರು ಹರಿಸಬೇಕು ಈ ಮೂಲಕ ಕೆರೆ ಕಟ್ಟೆಗಳು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ನೀರುಬಿಡುಗಡೆಗೆ ಆಗ್ರಹಿಸಿ ರೈತರು ಕಾಡಾ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಈ ವೇಳೆ ರೈತರನ್ನ ಪೋಲಿಸರು ತಡೆದಿದ್ದಾರೆ. ಈ ಸಮಯದಲ್ಲಿ  ಪೋಲಿಸರ ಜೊತೆರೈತರಿ  ಮಾತಿನ ಚಕಮುಕಿ ನಡೆಸಿದ ಘಟನೆ ನಡೆಯಿತು. ಹಾಗೆಯೇ ನೀರು ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಮುಂದುವರೆಸಲು ರೈತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Key words: mysore-urge – water –release-Attempts –farmer-Kaada’s office.