‘ಬಿಟಿಎಸ್-2020’ದಲ್ಲಿ ಕ್ವೀನ್ಸ್ ಲ್ಯಾಂಡ್ ಪ್ರತಿನಿಧಿ: ಭಾರತದ ಬಾಹ್ಯಾಕಾಶ ತಾಂತ್ರಿಕತೆಯತ್ತ ಆಸ್ಟ್ರೇಲಿಯಾ ಕಣ್ಣು…

ಬೆಂಗಳೂರು,ನವೆಂಬರ್,20,2020(www.justkannada.in):  ಬಾಹ್ಯಾಕಾಶ ತಂತ್ರಜ್ಞಾನ, ರಾಕೆಟ್ ಅಭಿವೃದ್ಧಿ, ಕ್ಷಿಪಣಿ ಅಭಿವೃದ್ಧಿ, ರಾಕೆಟ್ ಉಡಾವಣಾ ಸೌಲಭ್ಯಗಳಲ್ಲಿ ಪ್ರತಿಷ್ಠಿತ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದ ಬಾಹ್ಯಾಕಾಶ ಸಂಸ್ಥೆಗಳ ಜೊತೆ ಕೈಜೋಡಿಸುವ ಮೂಲಕ ಭಾರತದ ಕಡಿಮೆ ವೆಚ್ಚದ ಉಡಾವಣಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆಸ್ಟ್ರೇಲಿಯಾ ಉತ್ಸುಕವಾಗಿದೆ ಎಂದು ಕ್ವೀನ್ಸ್ ಲ್ಯಾಂಡ್ ಸರ್ಕಾರದ ಪ್ರತಿನಿಧಿ ಲಿಯೇನ್ ಕೆಂಪ್ ತಿಳಿಸಿದರು.

ಇಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಮೇಳ-2020 ಕೋವಿಡ್ ಪೂರ್ವ ಅವಧಿಯಲ್ಲಿ “ಸೈಬರ್ ಕ್ಷೇತ್ರದಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದವರೆಗೆ ಆಸ್ಟ್ರೇಲಿಯಾದ ಆವಿಷ್ಕಾರಗಳು ಮತ್ತು ಸವಾಲುಗಳ” ಕುರಿತು ಶುಕ್ರವಾರ ನಡೆದ ವರ್ಚುವಲ್ ಸಂವಾದದಲ್ಲಿ ಮಾತನಾಡಿದರು.

ಕೋವಿಡ್ ನಂತಹ ಸಾಂಕ್ರಾಮಿಕ ವ್ಯಾದಿ ಇಡೀ ವಿಶ್ವವನ್ನು ಬಾಧಿಸುತ್ತಿರುವ ಈ ಕಾಲಘಟ್ಟದಲ್ಲಿ ಸೈಬರ್ ತಾಣವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆದು  ಸುಳ್ಳು ವದಂತಿಗಳಿಂದ ಜನರನ್ನು ರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತು ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆಯ ಸೈಬರ್ ವ್ಯವಹಾರಗಳು ಮತ್ತು ನಿರ್ಣಾಯಕ ತಂತ್ರಜ್ಞಾನದ ರಾಯಭಾರಿ ಡಾ. ತೋಬಿಯಾಸ್ ಫೀಕಿನ್ ತಿಳಿಸಿದರು.kannada-journalist-media-fourth-estate-under-loss

ಕೋವಿಡ್ ಒಡ್ಡಿದ ಅಗ್ನಿಪರೀಕ್ಷೆಯನ್ನು ನಾವು ಯಶಸ್ವಿಯಾಗಿ ಎದುರಿಸಿದ್ದೇವೆ. ಈ ಸಂದರ್ಭವನ್ನೇ ಒಂದು ಅವಕಾಶವನ್ನಾಗಿ ಸ್ವೀಕರಿಸಿ ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೇವೆ. ಆರೋಗ್ಯ ಕ್ಷೇತ್ರದ ಅಗತ್ಯಗಳನ್ನು ಪೂರೈಸುವಲ್ಲಿ ಬಾಹ್ಯಾಕಾಶ ಚಟುವಟಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದು ವಿವರಿಸಿದರು.

ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಮಾತನಾಡಿ, ಸೈಬರ್ ಸುರಕ್ಷತೆ ವಿಚಾರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅದರಲ್ಲೂ ಮುಖ್ಯವಾಗಿ ಕರ್ನಾಟಕ ಉತ್ತಮ ಬಾಂಧವ್ಯ ಹೊಂದಿರುವುದನ್ನು ಪ್ರಸ್ತಾಪಿಸಿದರು. ದೇಶದಲ್ಲಿಯೇ ಮೊತ್ತಮೊದಲ ಕ್ರಿಮಿನಲ್ ಸೈಬರ್ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕದ್ದಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಆಸ್ಟ್ರೇಲಿಯಾ ನಡುವೆ ಇನ್ನಷ್ಟು ತಂತ್ರಜ್ಞಾನ ವಿನಿಮಯಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ನ್ಯೂಸೌತ್-ವೇಲ್ಸ್ ವಿಶ್ವವಿದ್ಯಾಲಯದ ಕ್ವಾಂಟಮ್ ಕಂಪ್ಯೂಟೇಶನ್ ಮತ್ತು ಸಂಪರ್ಕ ತಂತ್ರಜ್ಞಾನ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಮಿಚೆಲ್ ಸಿಮನ್ಸ್ ಅವರು ಮಾತನಾಡಿ, ಕಳೆದ ಒಂದು ದಶಕದ ಅವಧಿಯಲ್ಲಿ ಕ್ವಾಂಟಮ್ ಕಂಪ್ಯೂಟೇಶನ್ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆಗಳು ನಡೆಯುತ್ತಿದ್ದು ಆಸ್ಟ್ರೇಲಿಯಾವು ವಿಶ್ವದಾದ್ಯಂತ 25ಕ್ಕೂ ಅಧಿಕ ಪಾಲುದಾರರ ಜೊತೆ ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ವಿವರಿಸಿದರು.queensland-representative-bts-2020o-australia-space-technology-india

ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮತ್ತಷ್ಟು ವಿಸ್ತರಿಸಲು ಭಾರತದೊಂದಿಗೆ ದೀರ್ಘಾವಧಿ ಸಹಕಾರಕ್ಕಾಗಿ ಆಸ್ಟ್ರೇಲಿಯಾ ಎದುರು ನೋಡುತ್ತಿದೆ ಎಂದು  ತಿಳಿಸಿದ ಅವರು, ದತ್ತಾಂಶ ಸುರಕ್ಷತೆ, ಏರೋಸ್ಪೇಸ್, ಔಷಧಿ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಅತ್ಯುತ್ಕೃಷ್ಟವಾದ ಆನ್ವಯಿಕತೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.

ಆಸ್ಟ್ರೇಲಿಯಾ ಸರ್ಕಾರದ ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕರೇನ್ ಆಂಡ್ರ್ಯೂ, ಭಾರತದಲ್ಲಿ ಆಸ್ಟೇಲಿಯಾದ ಹೈಕಮಿಷನರ್ ಆಗಿರುವ ಬೇರಿ ಓಫರೇಲ್ ಮೊದಲಾದ ತಜ್ಞರು ಸಂವಾದದಲ್ಲಿ ಪಾಲ್ಗೊಂಡಿದ್ದರು.

Key words: Queensland- Representative – BTS-2020O-Australia- space technology – India