ಮೈಸೂರು ಸಂಚಾರ ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ…

ಮೈಸೂರು,ಜೂ,26,2019(www.justkannada.in):  ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಳಲುತ್ತಿದ್ದ ವ್ಯಕ್ತಿಯನ್ನ ಪೊಲೀಸ್ ವಾಹನದಲ್ಲೇ ಸಾಗಿಸಿ ಜೀವ‌ ಉಳಿಸುವ ಮೂಲಕ ಮೈಸೂರು ಸಂಚಾರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಜೆ.ಎಲ್.ಬಿ. ರಸ್ತೆಯ ಮುಡಾ ಸರ್ಕಲ್ ಬಳಿ ಬೈಕ್ ಗೆ ಕೆಸ್ಸಾರ್ಟಿಸಿ ಬಸ್ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಬೈಕ್ ಸವಾರ  ಉಮಾಶಂಕರ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಉಮಾಶಂಕರ್ ರಕ್ತಸ್ರಾವದಿಂದ ಸ್ಥಳದಲ್ಲಿ ಬಳಲುತ್ತಿದ್ದರು. ಈ ವೇಳೆ ಅಂಬುಲೆನ್ಸ್ ಕರೆ ಮಾಡಿದರೂ ಸಕಾಲಕ್ಕರ ಬಾರದ ಕಾರಣ. ಅದೇ ಮಾರ್ಗವಾಗಿ ತೆರಳುತ್ತಿದ್ದ ಕೆ.ಆರ್. ಸಂಚಾರ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್, ತಮ್ಮ‌ ಇಂಟರ್ ಸೆಪ್ಟರ್ ವಾಹನಕ್ಕೆ ಗಾಯಾಳು ಉಮಾಶಂಕರ್ ರನ್ನ ಕೂರಿಸಿ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಗಾಯಗೊಂಡಿದ್ದ ಉಮಾಶಂಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Key words: Mysore- traffic police -praised – public – Humanity-work.