ಡಾಲಿ ಧನಂಜಯ ‘ಹೆಡ್​​ ಬುಷ್’ ಟೈಟಲ್​ ಲಾಂಚ್ ಮಾಡಿದ ಪವರ್ ಸ್ಟಾರ್

ಬೆಂಗಳೂರು, ಆಗಸ್ಟ್ 17, 2020 (www.justkannada.in): ಡಾಲಿ ಧನಂಜಯ ಅಭಿನಯದ ಹೆಡ್​​ ಬುಷ್ ಸಿನಿಮಾ ಟೈಟಲ್​ ಬಿಡುಗಡೆಯಾಗಿದೆ.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ‘ಹೆಡ್​​ ಬುಷ್’ ಸಿನಿಮಾ ಟೈಟಲ್​ ಲಾಂಚ್​ ಮಾಡಿದ್ದಾರೆ.
80ರ ದಶಕದಲ್ಲಿ ಬೆಂಗಳೂರಿನ ಅಂಡರ್​ವರ್ಲ್ಡ್​ಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಚಿತ್ರವನ್ನು ಅಶುಬೆದ್ರ ನಿರ್ಮಾಣ ಮಾಡುತ್ತಿದ್ದು, ಶೂನ್ಯ ಆಯಕ್ಷನ್​ ಚೊಚ್ಚಲ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್‌ ಸೇರಿ ಒಟ್ಟು 6 ಭಾಷೆಗಳಲ್ಲಿ ‘ಹೆಡ್​​ ಬುಷ್’ ಸಿನಿಮಾ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.