ಮೈಸೂರಿನಲ್ಲಿ ಪತಿಯಿಂದಲೇ ಪತ್ನಿ ಹತ್ಯೆ.

Promotion

ಮೈಸೂರು,ಫೆಬ್ರವರಿ,13,2022(www.justkannada.in): ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಉದಯಗಿರಿ ಎ.ಕೆ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಸಂಧ್ಯಾ (23) ಕೊಲೆಯಾದ ಪತ್ನಿ. ಕಿರಣ್ (27) ಕೊಲೆ ಮಾಡಿದ ಪತಿ. ಈ ಜೋಡಿ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ನಡುವೆ ಮಾನಸಿಕವಾಗಿ ಜರ್ಜರಿತನಾಗಿದ್ದ ಕಿರಣ್ ಮೂರು ತಿಂಗಳಿನಿಂದ ಪುನರ್ವಸತಿ ಕೇಂದ್ರದಲ್ಲಿದ್ದು ಬಂದಿದ್ದ.

ಈ ಮಧ್ಯೆ ಗಂಡ ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು ಈ ವೇಳೆ ಪತ್ನಿ‌ ಸಂಧ್ಯಾ  ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಪತಿ ಕಿರಣ್  ಕೊಲೆ ಮಾಡಿದ್ದಾನೆ. ಇನ್ನು ಕಿರಣ್ ನನ್ನ ಉದಯಗಿರಿ ಠಾಣಾ ಪೊಲೀಸರ ವಶಕ್ಕೆ ಪಡೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

key words: mysore-murder-husband-wife