Thursday, August 6, 2026

BDA Apartments

Home Front Page ಸಿದ್ಧು ಅವಧಿಯಲ್ಲೇ ಮೂರು ಪಟ್ಟು ಜಾಸ್ತಿ ಸಾಲ: ಅವರಿಗೆ ಆರ್ಥಿಕ ವ್ಯವಸ್ಥೆ ಅರ್ಥವಾಗಲ್ಲ- ಪ್ರತಾಪ್ ಸಿಂಹ...

ಸಿದ್ಧು ಅವಧಿಯಲ್ಲೇ ಮೂರು ಪಟ್ಟು ಜಾಸ್ತಿ ಸಾಲ: ಅವರಿಗೆ ಆರ್ಥಿಕ ವ್ಯವಸ್ಥೆ ಅರ್ಥವಾಗಲ್ಲ- ಪ್ರತಾಪ್ ಸಿಂಹ ಟಾಂಗ್.

ಮೈಸೂರು,ಫೆಬ್ರವರಿ,13,2022(www.justkannada.in):  ಬಿಜೆಪಿ ಹೆಚ್ಚು ಸಾಲ ಮಾಡಿ ಬಜೆಟ್ ಮಂಡಿಸಿದೆ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಮೂರು ಪಟ್ಟು ಜಾಸ್ತಿ ಸಾಲ ಮಾಡಿ ಹೋಗಿದ್ದಾರೆ. ಸಾಲ ಮಾಡದೆ ಆಡಳಿತ ನಡೆಸಿದ್ದಾರಾ ಸಿದ್ದರಾಮಯ್ಯ ಹೇಳಲಿ. ಅರ್ಥ ವ್ಯವಸ್ಥೆಯ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ. ತನಗೆ ಏನೇ ಹೇಳಿದ್ರು ಮಾಧ್ಯಮದಲ್ಲಿ ಪ್ರಕಟವಾಗುತ್ತೆ ಎಂದು ಹೇಳಿಕೆ ನೀಡುತ್ತಾರೆ ಅಷ್ಟೇ. ರಾಜ್ಯದಲ್ಲಿ ಇವರ ಆಡಳಿತದಲ್ಲೇ ಹೆಚ್ಚು ಸಾಲ ಉಂಟಾಗಿದೆ. ಕೆಂಗಲ್ ಹನುಮಂತಯ್ಯ ರಿಂದ ಜಗದೀಶ್ ಶೆಟ್ಟರ್ ವರೆಗಿನ ಸಾಲ ಹಾಗೂ ಸಿದ್ದರಾಮಯ್ಯ ಸರ್ಕಾರದ ಸಾಲವನ್ನ ಒಂದು ತಕ್ಕಡಿಗೆ ಇಟ್ಟರೆ, ಸಿದ್ದರಾಮಯ್ಯರದ್ದೇ ಹೆಚ್ಚು ಸಾಲ. ಸಾಲ ತಂದು ಕಾಂಗ್ರೆಸ್ ವೈಯಕ್ತಿಕ ಖಜಾನೆ ತುಂಬಿಸಿಕೊಂಡಿದೆ. ಸಾಲ ಮಾಡದೆ ಯಾವ ಸರ್ಕಾರ ನಡೆದಿದೆ ಸಿದ್ದರಾಮಯ್ಯ ತಿಳಿಸಲಿ. ತಾವೇ ಸಿಎಂ ಆಗಿದ್ದಾಗ ಪಾಲ್ಕನ್ ಫ್ಯಾಕ್ಟರಿ ಮುಚ್ಚಿದ್ದೇಕೆ. ಫ್ಯಾಕ್ಟರಿಯ ನೌಕರರ ಕೆಲಸ ಹೋಗಿದೆ. ಈ ಸಮಯದಲ್ಲಿ ಸಿಎಂ ಆಗಿದ್ದರೂ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನವರು ಸಾಲ ಮಾಡಿ ತಮ್ಮ ಖಜಾನೆ ತುಂಬಿಸಿ ಕೊಂಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆಯೇ ಗೊತ್ತಿಲ್ಲ. ಬಜೆಟ್ ಬಂದರೆ ಸಾಕು ಲಾ ಪಾಸ್ ಮಾಡಿರೋರು ಬಿಎ ಪಾಸ್ ಮಾಡಿರೋರೆಲ್ಲಾ ಆರ್ಥಿಕ ತಜ್ಞರಾಗುತ್ತಾರೆ. ಸಿದ್ದರಾಮಯ್ಯ ಅವರಿಗೆ ಆರ್ಥಿಕ ವ್ಯವಸ್ಥೆ ಅರ್ಥವಾಗಲ್ಲ ಹೀಗಾಗಿ, ಅವರು ಸುಮ್ಮನೆ ಸಾಲದ ಬಜೆಟ್ ಅಂತಾ ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಅವರು 13 ಬಜೆಟ್ ಮಂಡಿಸಿದ್ದಾರೆ ಅಷ್ಟೆ. ಅವರಿಗೆ ಆರ್ಥಿಕ ವ್ಯವಸ್ಥೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ನಾವು ಸಾಲ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಬಳಸುತ್ತೇವೆ. ಕಾಂಗ್ರೆಸ್ ನವರು ಸಾಲ ಮಾಡಿ ತಮ್ಮ ಖಜಾನೆ ತುಂಬಿಸಿ ಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ – ರಾಜ್ಯದಲ್ಲಿ ಏನೇನಾಗಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನೀಲಿ ಶಾಲು ಹಾಕುವವರೆಲ್ಲ ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ ಓದಿ.

ನೀಲಿ ಶಾಲು ಹಾಕುವವರೆಲ್ಲ ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ ಓದಿ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಈ ದೇಶದ ಮುಸ್ಲಿಮರ ಬಗ್ಗೆ ಅಂದೇ ತಿಳಿದಿತ್ತು. ನೀಲಿ ಶಾಲು ಧರಿಸುವ ಮೊದಲು ವಾಸ್ತವ ತಿಳಿದುಕೊಳ್ಳಿ. ಅಂಬೇಡ್ಕರ್ ಅವರು ಬರೆದಿರುವ ಥಾಟ್ಸ್ ಆನ್ ಪಾಕಿಸ್ತಾನ್ ಓದಿಕೊಳ್ಳಿ. ಆ ಪುಸ್ತಕದಲ್ಲಿ ಎಲ್ಲ ವಿಚಾರವನ್ನು ಅಂಬೇಡ್ಕರ್ ತಿಳಿಸಿದ್ದಾರೆ. ನೀಲಿ ಶಾಲು ಧರಿಸುವ ಮುನ್ನ ಓಡಿಕೊಂಡರೆ ಒಳ್ಳೆಯದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ರಾಷ್ಟ್ರೀಯ ತನಿಖೆಗೆ ಶಾಸಕ ರಘುಪತಿ ಭಟ್ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ,  ವೈಯಕ್ತಿಕವಾಗಿ ರಘುಪತಿ ಭಟ್ ರನ್ನು ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಣ ಸಚಿವ ನಾಗೇಶ್, ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಸಮವಸ್ತ್ರವೇ ಅಂತಿಮ ಎಂಬ ನಿಲುವಿಗೆ ಬದ್ಧರಾಗಿದ್ದಾರೆ. ಕರಾವಳಿ ಭಾಗ ಅಶಾಂತಿಯ ಕೇಂದ್ರವಾಗಿದೆ. ಕೇರಳ ಮಾದರಿಯ ಹತ್ಯೆ ಮತ್ತು ಮತಾಂಧತೆ ಕರ್ನಾಟಕಕ್ಕೂ ಹಬ್ಬಿದೆ, ಅದು ಕರಾವಳಿ ಮುಖಾಂತರ ಹಬ್ಬಿದೆ. ಈ ಬಗ್ಗೆ ಉಡುಪಿ ಹಾಗೂ ಮಂಗಳೂರು ಎಚ್ಚೆತ್ತುಕೊಳ್ಳದಿದ್ದರೆ ಇನ್ನೊಂದು ಕಾಸರಗುಡು ಹಾಗೂ ಕೇರಳ ಮಾದರಿಯಾಗಲಿದೆ. ಈ ವ್ಯವಸ್ಥಿತ ಪಿತೂರಿ ಬಗ್ಗೆ ರಾಷ್ಟ್ರೀಯ ತನಿಖೆಯಾಗಬೇಕು ಎನ್ನುವದಕ್ಕೆ ರಘುಪತಿ ಭಟ್ ಒತ್ತಾಯಿಸಿದ್ದಾರೆ. ಅವರ ಈ ತೀರ್ಮಾನವನ್ನು ನಾನು ಸಮರ್ಥಿಸುತ್ತೇನೆ. ಈ ಕಾರಣಕ್ಕೆ ರಘುಪತಿ ಭಟ್ ಅವರನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು.

ಹಿಜಾಬ್ ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ.

ಹಿಜಾಬ್ ಗಲಾಟೆಯ ಹಿಂದೆ ಕೆಎಫ್ ಡಿ, ಪಿಎಫ್ ಐ ಇದೆ. ಶಾಂತಿ ಕದಡಬೇಡಿ ಎಂದು ಮನವಿ ಮಾಡಬೇಡಿ. ಶಾಂತಿ ಕದಡುವವವರ ಮೇಲೆ ಕಠಿಣ ಕ್ರಮ ಕೈ ಗೊಳ್ಳಿ. ಸರಕಾರ ಕಠಿಣ ಕ್ರಮಕ್ಕೆ ಮುಂದಾಗಲೇಬೇಕು. ಕೇರಳದ ಮುಸ್ಲಿಂ ಸಂಘಟನೆಗಳಿಂದ ಪ್ರಭಾವಿತರಾಗಿರುವವರು ಶಾಂತಿಯ ಮನವಿಗೆ ಬಗ್ಗುವುದಿಲ್ಲ. ಮೊದಲು ಕೆಎಫ್ ಡಿ, ಪಿಎಫ್ ಐ ಸಂಘಟನೆ ಬಂದ್ ಮಾಡಿ. ಹಿಜಾಬ್ ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ. ಹಿಜಾಬ್ ಬಿಟ್ಟು ಕಿತಾಬ್ ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತೆ. ಹಿಜಾಬ್ ಅವರು ಬಿಟ್ಟು ಬಂದರೆ ಆ ಕ್ಷಣವೇ ಕೇಸರಿ ಶಾಲಿನ ಪ್ರಸ್ತಾಪವೇ ಇರಲ್ಲ ಎಂಧು ಸಂಸದ ಪ್ರತಾಪ್ ಸಿಂಹ ಹೇಳಿದರು.

Key words: former CM-Siddaramaiah-MP-Prathap simha