ಮೈಸೂರಿನ ‘ ಸಾ.ರಾ.ಚೌಲ್ಟ್ರಿ ‘ ಜಾಗದ ಸರ್ವೆಗೆ ಭೂ ದಾಖಲೆಗಳ ಇಲಾಖೆ ಆಯುಕ್ತರ ಆದೇಶ.

mysore-mla-sa.ra.mahesh-land-grabbing-issues-survey-karnataka-government

kannada t-shirts

 

ಮೈಸೂರು, ಸೆ.04, 2021 : (www.justkannada.in news) ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾಲಿಕತ್ವದ ಸಾ.ರಾ.ಚೌಲ್ಟ್ರಿ ಜಾಗದ ಸರ್ವೆ ನಡೆಸಲು ಭೂ ದಾಖಲೆಗಳ ಇಲಾಖೆ ಆಯುಕ್ತರ ಆದೇಶ.

ಮೈಸೂರಿನ ಆರ್.ಟಿ.ಐ ಕಾರ್ಯಕರ್ತ ಎನ್.ಗಂಗರಾಜ್ ಅವರು ಆ.11 ರಂದು ನೀಡಿರುವ ದೂರು ಅರ್ಜಿ ಆಧಾರಿಸಿ, ಸರಕಾರಿ ಜಾಗ ಸಂರಕ್ಷಿಸುವ ಸಲುವಾಗಿ ಸರ್ವೆ ನಡೆಸಲು ಮುಂದಾಗಿರುವ ಸರಕಾರ.

ಕೆಲ ದಿನಗಳ ಹಿಂದೆಯಷ್ಟೆ ಈ ಸಂಬಂಧ ಮೈಸೂರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿ, ಅದು ನೀಡಿದ್ದ ವರದಿ ಆಧಾರಿಸಿ ಶಾಸಕ ಸಾರಾ ಮಹೇಶ್ ವಿರುದ್ಧದ ಆರೋಪಗಳಿಗೆ ಕ್ಲೀನ್ ಚೀಟ್ ನೀಡಲಾಗಿತ್ತು. ಕೆಲ ಆಯ್ದ ಅಂಶಗಳನ್ನು ಮಾತ್ರ ಪರಿಶೀಲಿಸಿ ಕ್ಲೀನ್ ಚಿಟ್ ನೀಡಲಾಗಿದೆ. ಸಂಪೂರ್ಣವಾಗಿ ಪರಿಶೀಲನೆ ನಡೆಸಿಲ್ಲ ಎಂದು ಆರ್.ಟಿ.ಐ ಕಾರ್ಯಕರ್ತ ಎನ್.ಗಂಗರಾಜ್ ಇದೀಗ ಅಯುಕ್ತರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸರ್ವೆ ಇಲಾಖೆ ಆಯುಕ್ತರೇ ಸರಕಾರಿ ಜಾಗದ ಸರ್ವೆಗೆ ಆದೇಶಿಸಿದ್ದಾರೆ. ಆ. 31 ರಂದು ಈ ಆದೇಶ ಹೊರಡಿಸಲಾಗಿದ್ದು, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ.

ವಿಶೇಷ ಅಂದ್ರೆ, ಮೈಸೂರು ಜಿಲ್ಲೆಯ ಅಧಿಕಾರಿಗಳನ್ನು ಹೊರಗಿಟ್ಟು ಈ ಸರ್ವೇ ಕಾರ್ಯಕ್ಕೆ ಮುಂದಾಗಿರುವುದು. ಭೂ ದಾಖಲೆಗಳ ಉಪನಿರ್ದೇಶಕರಾದ ಮಂಡ್ಯದ ಬಿ.ಜಿ.ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ.ಲೋಹಿತ್ ಸರ್ವೆ ತಂಡದಲ್ಲಿನ ಅಧಿಕಾರಿಗಳು.

ಮೈಸೂರು ಜಿಲ್ಲೆಯ ಮೈಸೂರು ತಾಲೊಕು ಜಯಪುರ ಹೋಬಳಿ ಕೇರ್ಗಳ್ಳಿ ಗ್ರಾಮದ ಸರ್ವೆ ನಂ. 115, ಜಯಪುರ ಹೋಬಳಿ ಯಡಹಳ್ಳಿ ಗ್ರಾಮದ ಸರ್ವೆ ನಂ.69, 72, 72/1, 2 ಹಾಗೂ 71/1 ಕಸಬಾ ಹೋಬಳಿ ದಟ್ಟಹಳ್ಳಿ ಗ್ರಾಮದ ಸರ್ವೆ ನಂ. 130/3 ರಲ್ಲಿ ಸೇರಿರುವ ಸರ್ವೆ ನಂ.98, 131,132 ಕಸಬಾ ಹೋಬಳಿ ಲಿಂಗಾಂಬುದ್ದಿ ಸರ್ವೆ ನಂ.10,65 , ಶ್ರೀರಂಗಪಟ್ಟಣ ತಾಲೊಕು ಬೆಳಗೊಳ ಗ್ರಾಮದ ಸರ್ವೆ ನಂ.981 ಹಾಗೂ ಕಸಬಾ ಹೋಬಳಿ ದಟ್ಟಹಳ್ಳಿ ಗ್ರಾಮದ ಸರ್ವೆ ನಂ.123 ಗಳಿಗೆ ಸಂಬಂಧಿಸಿದಂತೆ ಸರಕಾರಿ ಜಮೀನಿನಲ್ಲಿ ಒತ್ತುವರಿಯಾಗಿರುವ ಬಗ್ಗೆ , ಸರಕಾರಿ ಸ್ವತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ತನಿಖೆಗೆ ಆದೇಶಿಸಲಾಗಿದೆ.

 

ENGLISH SUMMARY…

Commissioner issues order to verify documents of Sa. Ra. Choultry in Mysuru
Mysuru, Sept. 4, 2021 (www.justkannada.in): The Commissioner of Land Records Department has issued orders to conduct a survey of the land of the choultry owned by JDS MLA Sa. Ra. Mahesh.
The orders to conduct the survey have been issued following a complaint registered by RTI activist N. Gangaraju of Mysuru on August 11 to protect government land.
A committee was formed under the leadership of the Mysuru Regional Commissioner just four days ago. Sa. Ra. Mahesh was given a clean chit based on a report submitted by the committee.
RTI activist N. Gangaraju had complained that the clean chit has been given without verifying all the factors and without conducting a complete investigation. Following this, the Survey Department Commissioner has issued orders to conduct a survey on August 31 and has asked to submit a report within 10 days.
Keywords: Sa. Ra. Mahesh/ Choultry/ government land/ RTI activist/ N. Gangaraju/ Regional Commissioner/ survey

key words : mysore-mla-sa.ra.mahesh-land-grabbing-issues-survey-karnataka-government

 

website developers in mysore