ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ವಿರುದ್ಧ ಎಸಿಬಿಗೆ ಎನ್.ಆರ್ ರಮೇಶ್ ದೂರು.

ಬೆಂಗಳೂರು,ಸೆಪ್ಟಂಬರ್,4,2021(www.justkannada.in): ಅಧಿಕಾರ ದುರುಪಯೋಗ ಆರೋಪದ ಮೇಲೆ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ  ಗೌರವ್ ಗುಪ್ತ  ವಿರುದ್ಧ  ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ  ಗೌರವ್ ಗುಪ್ತ  ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನಿರಂತರವಾಗಿ ಹಲವಾರು ಕಾನೂನು ಬಾಹಿರ ಕಾರ್ಯಗಳನ್ನು ಎಸಗಿದ್ದಾರೆ. ‘ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘನೆ ಮಾಡಿದ್ದು ಕಾನೂನು ಬಾಹಿರವಾಗಿ ಉನ್ನತ ಹುದ್ದೆಗೆ ಅಶೋಕ್ ಎಂಬುವವರನ್ನ ನೇಮಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್ .ಆರ್ ರಮೇಶ್ ಆರೋಪಿಸಿ ದೂರು ನೀಡಿದ್ದಾರೆ.

Key words:  BJP Leader-NR Ramesh- complains – ACB- agains-t BBMP chief commissioner -Gaurav Gupta.