ಮೂರು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಾಗಿದ್ದು ಸತ್ಯ : ನೈಟ್ ಕರ್ಫ್ಯೂ ವಾಪಸ್ ಪಡೆಯುವಂತೆ ಎಂ.ಲಕ್ಷ್ಮಣ್ ಆಗ್ರಹ…

ಮೈಸೂರು,ಡಿಸೆಂಬರ್,24,2020(www.justkannada.in): ಪ್ರಚಾರ ಪ್ರಿಯರಾದ ಸಚಿವ ಸುಧಾಕರ್ ಸಿಎಂಗೆ ಮಿಸ್‌ಲೀಡ್ ಮಾಡಿ ಕರ್ಫ್ಯೂ ಜಾರಿ ಮಾಡಿಸಿದ್ದಾರೆ. ಯಾಕೆ ಕರ್ಫ್ಯೂ  ಎಂಬುದಕ್ಕೆ ವೈಜ್ಞಾನಿಕ ಕಾರಣ ಇದ್ದರೆ ಕೊಡಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಒತ್ತಾಯಿಸಿದ್ದಾರೆ.     Teachers,solve,problems,Government,bound,Minister,R.Ashok

ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸಚಿವ ಸುಧಾಕರ್ ಸಿಎಂಗೆ ಮಿಸ್‌ಲೀಡ್ ಮಾಡಿ ಕರ್ಫ್ಯೂ ಜಾರಿ ಮಾಡಿಸಿದ್ದಾರೆ. ಸಿಎಂ, ಯಾರೋ ಬರೆದು ಕೊಟ್ಟಿದ್ದನ್ನು ಓದಿ ಹೋಗುತ್ತಿದ್ದಾರೆ ಅಷ್ಟೆ. ಕರ್ಫ್ಯೂ ನಿಂದ ಏನೂ ಪ್ರಯೋಜನವಿಲ್ಲ. ತಕ್ಷಣ ಕರ್ಫ್ಯೂ ವಾಪಾಸ್ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.

ಮೂರು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ಸತ್ಯ…

ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಮೂರು ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಸತ್ಯ. ಚಾಮುಂಡೇಶ್ವರಿ, ವರುಣಾ,ಬಾದಮಿಯಲ್ಲಿ ಜೆಡಿಎಸ್‌ ಬಿಜೆಪಿ ಹೊಂದಾಣಿಕೆ ಆಗಿದೆ. ಇದು ನೂರಕ್ಕೆ ನೂರು ಸತ್ಯ. ಸಿದ್ದರಾಮಯ್ಯ ಹಾಗೂ ಅವರ ಪುತ್ರನನ್ನ ಸೋಲಿಸೋಕೆ ಒಳ ಒಪ್ಪಂದ ಆಗಿತ್ತು. ಇದರಲ್ಲಿ ಚಾಮುಂಡೇಶ್ವರಿಯಲ್ಲಿ ಅವರು ಯಶಸ್ವಿಯಾದ್ರು. ಉಳಿದ ಎರಡು ಕಡೆ ಅದು ವರ್ಕ್ ಆಗಿಲ್ಲ ಎಂದು ಹರಿಹಾಯ್ದರು.

ಇಷ್ಟೆ ಯಾಕೇ ಮಲ್ಲೇಶ್ವರಂ‌ನಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಬಿ.ಫಾರಂ ಕೊಡ್ತಿರೋರು ಅಶ್ವಥ್ ನಾರಾಯಣ್. ಮೂರು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕೆಂದು ಅಶ್ವಥ್ ನಾರಾಯಣ್ ನಿರ್ಧಾರ ಮಾಡ್ತಿದ್ದಾರೆ. ಇದನ್ನ ಒಳ ಒಪ್ಪಂದ ಅನ್ನದೆ ಇನ್ನೆನಂತಾರೆ ಕುಮಾರಸ್ವಾಮಿಯವರೇ? ಎಂದು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಎಂ. ಲಕ್ಷ್ಮಣ್ ಪ್ರಶ್ನೆ ಹಾಕಿದರು.mysore-kpcc-spokesperson-m-laxman-demands-back-night-curfew

ಬೆನಗಹಳ್ಳಿ ಡಿನೋಟಿಫಿಕೇಷನ್ ಪ್ರಕರಣ: ಸಿಎಂ ರಾಜೀನಾಮೆ ನೀಡಿ…

ಬೆನಗಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆ ರದ್ದತಿಗೆ ಕೋರ್ಟ್ ಒಪ್ಪಿಲ್ಲ. ಈಗ ಕೇಸ್ ವಿಚಾರಣೆ ಆರಂಭವಾಗುತ್ತಿದೆ. ನೀವು ಸಿಎಂ ಸ್ಥಾನದಲ್ಲಿದ್ದರೆ ನಿಷ್ಪಕ್ಷಪಾತ  ವಿಚಾರಣೆ ಹೇಗೆ ಸಾಧ್ಯ? ಹೀಗಾಗಿ ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ಇಲ್ಲವೇ ಸುಪ್ರೀಂಕೋರ್ಟ್ ಮೂಲಕ ವಿಚಾರಣೆ ತಡೆ ತಂದುಕೊಳ್ಳಿ. ಈ ಬಗ್ಗೆ ಬಿ.ಎಲ್. ಸಂತೋಷ್, ಪ್ರತಾಪ್‌ಸಿಂಹ ಯಾಕೇ ಧ್ವನಿ ಎತ್ತುತ್ತಿಲ್ಲ ಎಂದು ಎಂ. ಲಕ್ಷ್ಮಣ್ ಕಿಡಿಕಾರಿದ್ದಾರೆ.

Key words: mysore- kpcc spokesperson- M Laxman -demands –back-night curfew