ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ.

ಮೈಸೂರು,ಅಕ್ಟೋಬರ್,5,2022(www.justkannada.in): ಇಂದು ಐತಿಹಾಸಿಕ ಜಂಬೂಸವಾರಿ ನಡೆಯಲಿದ್ದು 750 ಕೆಜಿ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಲಿದ್ದಾನೆ.

ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲು ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಶಾಸಕರಾದ ಎಲ್. ನಾಗೇಂದ್ರ ಸಾಥ್ ನೀಡಿದರು.

ಸುತ್ತೂರು ಮಠಕ್ಕೆ ಭೇಟಿ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಳೆದ 2 ವರ್ಷಗಳಿಂದ  ಅದ್ದೂರಿಯಾಗಿ ದಸರಾ ಆಚರಣೆ ಆಗಿಲ್ಲ. ಬಹಳ ನಿರ್ಬಂಧದಿಂದ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ದಸರಾವನ್ನ ವೈಭವದಿಂದ. ಆಚರಿಸುತ್ತಿದ್ಧೇವೆ.  ರಾಜ್ಯ ವಿದೇಶದಿಂದ ಪ್ರವಾಸಿಗರು ಬರುತ್ತಿದ್ದಾರೆ. ಕರ್ನಾಟಕ ಜನತೆಗೆ  ಶುಭವಾಗಲಿ ಎಂದರು.

Key words: mysore dasara-CM -Basavaraja Bommai-Sattur Mutt