Sunday, August 30, 2026

BDA Apartments

Home Front Page ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ವೈಭವ: ವಿಜಯಯಾತ್ರೆ ಬಳಿಕ ಯದುವೀರ್ ರಿಂದ ಬನ್ನಿ ಮರಕ್ಕೆ ಪೂಜೆ...

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ವೈಭವ: ವಿಜಯಯಾತ್ರೆ ಬಳಿಕ ಯದುವೀರ್ ರಿಂದ ಬನ್ನಿ ಮರಕ್ಕೆ ಪೂಜೆ ಸಲ್ಲಿಕೆ.

ಮೈಸೂರು,ಅಕ್ಟೋಬರ್,5,2022(www.justkannada.in):  ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ದಸರಾ ವೈಭವ ಕಳೆಗಟ್ಟಿದ್ದು ಇಂದು ಐತಿಹಾಸಿಕ ಜಂಬೂಸವಾರಿ ನಡೆಯಲಿದೆ.

ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು ಸಂಪ್ರದಾಯದಂತೆ ರಾಜವಂಶಸ್ಥ ಯದುವೀರ್ ವಿಜಯಯಾತ್ರೆ ಬಳಿಕ ಭುವನೇಶ್ವರಿ ದೇಗುಲದಲ್ಲಿರುವ  ಬನ್ನಿಮರಕ್ಕೆ ಪೂಜೆ ಸಲ್ಲಿಕೆ ಮಾಡಿದರು.

ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ತೆರೆದ ವಾಹನದಲ್ಲಿ ಮೈಸೂರು ಅರಮನೆಯತ್ತ  ತರಲಾಗುತ್ತಿದೆ.

Key words: mysore-dasara-palace-Yadhuvir-vijayayatra