Tuesday, September 15, 2026

BDA Apartments

ಬಿಬಿಎಂಪಿ ಉಪ ಮೇಯರ್ ಆಗಿ ರಾಮ್ ಮೋಹನ್ ರಾಜು ಆಯ್ಕೆ… BDA JK_Adv BDA Adv
Home Front Page ಬಿಬಿಎಂಪಿ ಉಪ ಮೇಯರ್ ಆಗಿ ರಾಮ್ ಮೋಹನ್ ರಾಜು ಆಯ್ಕೆ…

ಬಿಬಿಎಂಪಿ ಉಪ ಮೇಯರ್ ಆಗಿ ರಾಮ್ ಮೋಹನ್ ರಾಜು ಆಯ್ಕೆ…

ಬೆಂಗಳೂರು,ಅ,1,2019(www.justkannada.in):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೇಗೇರಿದ್ದು ಮೇಯರ್ ಆಗಿ ಗೌತಮ್ ಕುಮಾರ್ ಉಪಮೇಯರ್ ಆಗಿ ರಾಮ್ ಮೋಹನ್ ರಾಜು ಆಯ್ಕೆಯಾಗಿದ್ದಾರೆ.

ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ರಾಮ್ ಮೋಹನ್ ರಾಜು ಅವರಿಗೆ 129ಮತಗಳು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಗಮ್ಮ ಅವರಿಗೆ 116 ಮತಗಳು ಚಲಾವಣೆಯಾಗಿವೆ. ಈ ಮೂಲಕ ಬೊಮ್ಮನಹಳ್ಳಿ ಕಾರ್ಪೋರೇಟರ್  ರಾಮ್ ಮೋಹನ್ ರಾಜು ನೂತನ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್  ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೌತಮ್ ಕುಮಾರ್  129 ಮತಗಳನ್ನ ಪಡೆದು ಗೆಲುವು ಪಡೆದುಕೊಂಡಿದ್ದರು. ಇದೀಗ ಮೇಯರ್ ಉಪಮೇಯರ್ ಆಯ್ಕೆ ಕುರಿತು ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

Key words: Ram Mohan Raju- elected – Deputy Mayor -BBMP