ನಂಬಿದ್ರೆ ನಂಬಿ, ಬಿಟ್ರೆ ಬಿಡಿ : ಈ ಮನೆಗೆ ಅಡಿಪಾಯನೇ ಇಲ್ಲ; ಟೆಕ್ನಾಲಜಿನೇ ಎಲ್ಲ..!

ಮೈಸೂರು, ಜ.12, 2022 : (www.justkannada.in news ) ಯಾವುದೇ ಒಂದು ಕಟ್ಟಡದ ಭದ್ರತೆ ಹಾಗೂ ಧೀರ್ಘ ಬಾಳಿಕೆ ಅದರ ಅಡಿಪಾಯದ ಮೇಲೆ ನಿಂತಿರುತ್ತದೆ. ಆದ್ದರಿಂದಲೇ ಮನೆಯ ಸುಭದ್ರತೆಗೆ ಅಡಿಪಾಯನೇ ಮೂಲ. ಆದರೆ ಈ ಫಾರ್ಮೂಲವನ್ನು ಬ್ರೇಕ್ ಮಾಡುವ ತಂತ್ರಜ್ಞಾನವೊಂದು ಸದ್ದಿಲ್ಲದೆ ಬಳಕೆಗೆ ಬಂದಿದೆ.

ಮನೆ ಎಂದರೆ ಕೇವಲ ಇಟ್ಟಿಗೆ, ಗೋಡೆ, ಕಬ್ಬಿಣ, ಕಿಟಕಿ, ಬಾಗಿಲುಗಳು ಇರುವುದಷ್ಟೇ ಅಲ್ಲ. ಮನೆ ಗಟ್ಟಿಯಾಗಿ ನಿಲ್ಲಲ್ಲು ಅಡಿಪಾಯ ತುಂಬಾ ಮುಖ್ಯ. ಇದೀಗ, ಈ ಹಳೆ ಪದ್ಧತಿಗೆ ತಿಲಾಂಜಲಿ ಇಟ್ಟು, ಫೌಂಡೇಶನ್ ಇಲ್ಲದೆಯೇ ಗಟ್ಟಿಮುಟ್ಟಾದ ಮನೆ ಕಟ್ಟಲು ಸಾಧ್ಯ ಎಂಬುದನ್ನು ಮೈಸೂರಿನ ಆರ್ಕಿಟೆಕ್ಟ್ ಶರತ್ ಕುಮಾರ್ ಎಂ.ಪಿ. ತೋರಿಸಿಕೊಟ್ಟಿದ್ದಾರೆ.

ಜತೆಗೆ ಇದರಿಂದ ಕಟ್ಟಡ ನಿರ್ಮಾಣಕ್ಕೆ ತಗುಲಬಹುದಾದ ಒಟ್ಟು ಮೊತ್ತದಲ್ಲಿ ಶೇ.20ರಿಂದ 30ರಷ್ಟು ಹಣ ಸೇವ್ ಮಾಡಬಹುದು. ಈ ಹೊಸ ವಿಧಾನಕ್ಕೆ ‘ಅಡ್ವಾನ್ಸ್ ರ್ಯಾಪಿಡ್ ಕನ್ಸ್ ಸ್ಟ್ರಕ್ಷನ್ ’ ಎಂದು ಕರೆಯಲಾಗುತ್ತದೆ. ಬಹುಶಃ ಫೌಂಡೇಶನ್ ಇಲ್ಲದೆ ಕರ್ನಾಟಕದಲ್ಲಿ ತಲೆ ಎತ್ತಿದ ಮೊದಲ ಮನೆ ಇದು.

ಅಡಿಪಾಯ ಇಲ್ಲದೆ ಕಟ್ಟುವುದು ಹೇಗೆ?:

ಸಾಮಾನ್ಯವಾಗಿ ಅಡಿಪಾಯ ಇಲ್ಲದೆ ಮನೆ ಕಟ್ಟುವ ಮೊದಲು ಒಂದೇ ಮಟ್ಟ ಇರಲಿ ಎಂಬ ಉದ್ದೇಶಕ್ಕೆ ಸೈಟ್ ಅನ್ನು ಶುಚಿಗೊಳಿಸಬೇಕಾಗುತ್ತದೆ. ನಂತರ ಪೈಲ್ ಫೌಂಡೇಶನ್ ಮಾಡಲಾಗುತ್ತದೆ. ಇಲ್ಲಿ ಭೂಮಿಯನ್ನು 7 ಅಡಿ ಡ್ರಿಲ್ ಮಾಡಲಾಗುತ್ತದೆ. ಅಲ್ಲಿ ಕಬ್ಬಿಣದ ರಾಡುಗಳನ್ನು ಜೋಡಿಸಿ ನಂತರ ಕಾಲಂಸ್‌ಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ರಾತ್ರಿ ವೇಳೆ ಲೇಸರ್ ಲೆವೆಲ್ ಗುರುತು ಮಾಡಲಾಗುತ್ತದೆ. ಅಡಿಪಾಯ ಹಾಕಿ ಮನೆ ಕಟ್ಟಲು ಹೆಚ್ಚಿನ ಕೆಲಸಗಾರರ ಬೇಕಾದರೆ ಇಲ್ಲಿ ಅಷ್ಟೊಂದು ಜನ ಬೇಕಾಗುವುದಿಲ್ಲ. ಪ್ಲಿಂಟ್ ಕನ್ಸ್ ಸ್ಟ್ರಕ್ಷನ್ ನಂತರ ಗೋಡೆಗಳನ್ನು ಎತ್ತರಿಸಿ ಮನೆ ಕಟ್ಟಲಾಗುತ್ತದೆ. ಜಿ (ನೆಲ ಅಂತಸ್ತು ) ಪ್ಲಸ್ 2 ವರೆಗೆ ಅಡಿಪಾಯ ಇಲ್ಲದೆ ಮನೆಯನ್ನು ಕಟ್ಟಬಹುದು.

‘‘ಸಾಮಾನ್ಯವಾಗಿ ಶೇ.20-30ರಷ್ಟು ಹಣ ಫೌಂಡೇಶನ್‌ಗೆ ಬೇಕಾಗುತ್ತದೆ. ಜತೆಗೆ ನಿರ್ಮಾಣ ಕಾರ್ಯಕ್ಕೆ 6 ರಿಂದ 7 ತಿಂಗಳು ಬೇಕು. ಆದರೆ, ಅಡಿಪಾಯ ಇಲ್ಲದೆ ಮನೆ ಕಟ್ಟಲು ಜಸ್ಟ್ 3 ತಿಂಗಳು ಸಾಕು. ಎರಡು ವರ್ಷ ನಾವು ಒಂದು ವಿದೇಶಿ ಕಂಪನಿ ಜೊತೆ ಕೆಲಸ ಮಾಡಿದೆವು. ಅಲ್ಲಿ ಪೈಲ್ ಫೌಂಡೇಶನ್‌ಗೆ ಹೆಚ್ಚಿನ ಆದ್ಯತೆ ನೀಡಿದರು. ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಎಚ್.ಡಿ.ಕೋಟೆ ಹ್ಯಾಂಡ್‌ಪೋಸ್ಟ್ ಬಳಿ ಒಂದು ಡೈರಿಯನ್ನು ಅಡಿಪಾಯ ಇಲ್ಲದೆ ನಿರ್ಮಾಣ ಮಾಡಿದೆವು. ಅದು ಸಕ್ಸಸ್ ಆಯಿತು. ಆ ನಂತರ ಇದೀಗ ಬಂಡಿಪಾಳ್ಯದ ಬಳಿ ಮನೋಹರ್ ಪವಾರ್ -ಹೇಮಲತಾ ದಂಪತಿಗಳ ಮನೆಯನ್ನು  ಯಶಸ್ವಿಯಾಗಿ ಕಟ್ಟಿದ್ದೇವೆ ’’ ಎನ್ನುತ್ತಾರೆ ಶರತ್ ಕುಮಾರ್ ಎಂ.ಪಿ.

ಮೂರು ಹಂತಗಳು:

ಈ ನಿರ್ಮಾಣ ಕಾರ್ಯದಲ್ಲಿ ಮೂರು ವಿಧಾನವನ್ನು ಅನುಸರಿಸಲಾಗಿದೆ. ಮೊದಲನೇಯದು ಪೈಲ್ ಫೌಂಡೇಶನ್. ಮತ್ತೊಂದು ಪ್ಲಿಂಟ್‌ ಬೀಮ್ ಮೆಥೆಡ್. ಕೊನೆಯದು ಸ್ಲಾಬ್ ಆನ್ ಗ್ರೇಡ್. ಈ ಮೂರು ವಿಧಾನಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಮನೆ ಕಟ್ಟಲಾಗಿದೆ. ಸಾಮಾನ್ಯವಾಗಿ ಮನೆ ಕಟ್ಟುವಾಗ ಮೆಟೀರಿಯಲ್ ಹೆಚ್ಚು ಬೇಕು. ಆದರೆ, ಇಲ್ಲಿ ಬೇಕಾಗುವುದಿಲ್ಲ. ಕಾಂಕ್ರೀಟ್ ಹೆಚ್ಚು ಬಳಸುವುದರಿಂದ ಕಟ್ಟಡವು 75ರಿಂದ 100 ವರ್ಷದವರೆಗೂ ಗಟ್ಟಿಮುಟ್ಟಾಗಿರುತ್ತದೆ.

ಅಕ್ಕಪಕ್ಕ ಜಾಗ ಇರಬೇಕು

ಅಡಿಪಾಯ ಇಲ್ಲದೆ ಮನೆ ಕಟ್ಟುವಾಗ ಸೈಟಿನ ಅಕ್ಕಪಕ್ಕ ಜಾಗ ಇರಬೇಕು. ಕಾರಣ ಯಂತ್ರಗಳ ಮೂಲಕ ಡ್ರಿಲ್ ಮಾಡಬೇಕಾಗಿರುವುದು. ಆದ್ದರಿಂದ ಯಂತ್ರ ಬಳಸಲು ಅಕ್ಕಪಕ್ಕ ಜಾಗವಿದ್ದರೆ ಅನುಕೂಲ. 30/40 ಸೈಟಿಗೆ ಇದು ಅಗತ್ಯ. ಅಲ್ಲದೆ, ಸೈಟು ಹಾಗೂ ರಸ್ತೆ ಲೆವೆಲ್ ಸಮನಾಗಿರಬೇಕು.

ಇದರ ಪ್ರಯೋಜನಗಳೇನು?

1. ಶೇ.20ರಿಂದ 30ರಷ್ಟು ಹಣ ಉಳಿತಾಯ.
2. ಜಿ ಪ್ಲಸ್ 2 ವರೆಗೆ ಮನೆ ಕಟ್ಟಬಹುದು.
3. ಮನೆ ಕಟ್ಟಲು ಹೆಚ್ಚಿನ ಮೆಟೀರಿಯಲ್ ಬೇಕಾಗದು
4. ಕಟ್ಟಡ ಕಾರ್ಮಿಕರು ಹೆಚ್ಚು ಬೇಕಾಗಿಲ್ಲ
5. ತಾರಸಿಗೆ ಪ್ಲಾಸ್ಟರಿಂಗ್ ಅಗತ್ಯವಿಲ್ಲ
6. ಮೂರು ತಿಂಗಳಲ್ಲಿ ಮನೆ ರೆಡಿ
7.ಕಾಂಕ್ರೀಟ್ ನೆಲಹಾಸು ರೆಡಿ

For more detail, contact : M.P.Sharath : 9611605607

key words : Mysore-house-construction-with-out-foundation-cutting-cost- architecture-house

ENGLISH SUMMARY…

A unique technology to build houses without foundation!
Mysuru, January 12, 2022 (www.justkannada.in): The strength of any building lies in its foundation. That is why foundation plays a vital role in the construction of any building. However, new technology has come up silently by breaking this formula.
Sharath Kumar M.P., an architect from Mysuru has proven how a house can be built without a foundation. Not only that he claims that 20-30% of the manufacturing costs can be saved. He calls this new technology ‘Advanced Rapid Construction. Probably this is the first house in the state that has been built without a foundation.
Benefits
1. Saves 20%-30% money
2. A ground plus 2 floor house can be constructed using this technology
3. No need of more materials to construct the house
4. Lesser labour
5. No need of plastering the mould
6. Construction of house within three months
7. Concrete flooring ready