ಸಿಎಂ ಬಿಎಸ್ ವೈರಿಂದ ಹಿರಿಯ ಶಾಸಕರ ಕಡೆಗಣನೆ: ಅಸಮಾಧಾನ ಹೊರ ಹಾಕಿದ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ…

ಚಿತ್ರದುರ್ಗ, ಮೇ,29,2020(www.justkannada.in):   ಸಿಎಂ ಬಿಎಸ್ ಯಡಿಯೂರಪ್ಪ ಹಿರಿಯ ಶಾಸಕರನ್ನ ಕಡೆಗಣಿಸಿದ್ದಾರೆ.  ಶಾಸಕರಿಗೆ ಸ್ಥಾನ ತಪ್ಪಿಸಿ ಎಷ್ಟು ದಿನ ಸರ್ಕಾರ ನಡೆಸಲು ಸಾಧ್ಯ ಎಂದು ಬಿಜೆಪಿ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಶಾಸಕ ತಿಪ್ಪಾರೆಡ್ಡಿ, ಬಿಜೆಪಿಯಲ್ಲಿ ಬೇಸರ ಭಿನ್ನಮತವಿರುವುದು ನಿಜ. ಮೂರು ವರ್ಷ ಅಧಿಕಾರದಲ್ಲಿ ಇರುತ್ತೇವೆಂದು ಹೇಗೆ ಬೇಕು ಹಾಗೆ ಆಡಳಿತ ನಡೆಸುತ್ತಿದ್ದಾರೆ. ಬಿಎಸ್ ವೈ ಹಿರಿಯ ಶಾಸಕರನ್ನ ಕಡೆಗಣಿಸಿದ್ದಾರೆ. ಅವರಿಗೆ ಬೇಕಾದವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.  ಸಾಮಾಜಿಕ ನ್ಯಾಯ ಇಲ್ಲದೆ ಸ್ಥಾನ ನೀಡಿದ್ದಾರೆ. ಶಾಸಕರಿಗೆ ಸ್ಥಾನ ತಪ್ಪಿಸಿ ಎಷ್ಟು ದಿನ ಸರ್ಕಾರ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.

ಹಾಗೆಯೇ ನಿನ್ನೆ ಸಭೆ ಸೇರಿದ ಶಾಸಕರು ನನ್ನ ಜತೆ ಮಾತನಾಡಿದ್ದಾರೆ. ಕೊರೋನಾ ಇರುವುದರಿಂದ ಕಲ ಶಾಸಕರು ಮಾತ್ರ ಸಭೆ ಸೇರಿದ್ದಾರೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

Key words: MLA- GH Thippareddy- Outraged-CM BS yeddyurappa