ಕೇವಲ‌ ಸಂಬಳಕ್ಕೆ ಕೆಲಸ ಮಾಡದೆ ಸಮಾಜದ ಒಳಿತಿಗಾಗಿ ಸೇವೆ ಮಾಡಿ- ಪ್ರಶಿಕ್ಷಣಾರ್ಥಿಗಳಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಕಿವಿಮಾತು.

ಮೈಸೂರು,ಫೆಬ್ರವರಿ,2,2022(www.justkannada.in): ಕೇವಲ‌ ಸಂಬಳಕ್ಕೆ ಕೆಲಸ ಮಾಡದೆ ಸಮಾಜದ ಒಳಿತಿಗಾಗಿ ಸೇವೆ ಮಾಡಬೇಕು. ಕಾನೂನು ಪಾಲಿಸದವರ ಮನದಲ್ಲಿ ನಡುಕ ಹುಟ್ಟಿಸುವಂತೆ ಕೆಲಸ ಮಾಡಿ ಎಂದು  ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಕಿವಿಮಾತು ಹೇಳಿದರು.

ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನಡೆದ  45ನೇ ಪೊಲೀಸ್ ಉಪ ನಿರೀಕ್ಷರ ಸಿವಿಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಚಾಲನೆ ನೀಡಿದರು. ಮಂಜು ಮುಸುಗಿದ ವಾತವರಣದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಪ್ರತಿಜ್ಞಾ ವಿಧಿ ಬೋಧನೆ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್, ಪೊಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಸಮಾಜದಲ್ಲಿ ಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸ್ ಬಹಳ ಮುಖ್ಯ. ಕಾನೂನು ಪಾಲಿಸದವರ ಮನದಲ್ಲಿ ನಡುಕ ಹುಟ್ಟಿಸುವಂತೆ ಕೆಲಸ ಮಾಡಿ. ಸೈಬರ್ ಕ್ರೈಂಗಳು ಇತ್ತೀಚೆಗೆ ಹೆಚ್ಚಾಗಿವೆ. ಆ ಬಗ್ಗೆ ನಿಮ್ಮ ಜ್ಞಾನವನ್ನು ಹೆಚ್ಚು ಮಾಡಿಕೊಳ್ಳಿ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ‌‌ 200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆ ಕಟ್ಟಡದ ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳಿಗೆ ಮನೆಗಳ ನಿರ್ಮಾಣ ಆಗಲಿದೆ. ಕೇವಲ‌ ಸಂಬಳಕ್ಕೆ ಕೆಲಸ ಮಾಡದೆ ಸಮಾಜದ ಒಳಿತಿಗಾಗಿ ಸೇವೆ ಮಾಡಿ ಎಂದು ಕಿವಿಮಾತು ಹೇಳಿದರು.

ಕೋವಿಡ್ ಹಿನ್ನೆಲೆ ಪ್ರಶಿಕ್ಷಣಾರ್ಥಿಗಳ ಪೋಷಕರು ಭಾಗಿಯಾಗಿಲ್ಲ. ಒಂದು ಹೊಸ ರಕ್ತ ಗೃಹ ಇಲಾಖೆಗೆ ಸೇರ್ಪಡೆಯಾಗುತ್ತಿದೆ. ನಮ್ಮ ರಾಷ್ಟ್ರ ಧ್ವಜ ಪೊಲೀಸ್ ಧ್ವಜ ಒಟ್ಟಿಗೆ ಹಾರಾಡಿವೆ. ಅವರೆಡು ಬರಿ ಬಟ್ಟೆಯ ಚೂರಲ್ಲ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ಗಳಿಸಿರುವ ಪವಿತ್ರ ಧ್ವಜ. ತ್ಯಾಗದ ಸಂದೇಶ ಅಡಗಿದೆ. ರಾಷ್ಟ್ರ ಕಟ್ಟಲು ನಾವು ಬದುಕಬೇಕಿದೆ. ಬದುಕನ್ನು ಕಟ್ಟಿ ಮಡಿದರು ನಾವು, ರಾಷ್ಟ್ರ ಕಟ್ಟಲು ಬದುಕಬೇಕು. ರಕ್ಷಣೆ ಅಂದರೆ ಗಡಿಯ ಸೈನಿಕರು. ಆತಂರಿಕ ಭದ್ರತೆ ನಾಗರೀಕರ ಮಾನ ಪ್ರಾಣ ಕಾಪಾಡುವ ಹೊಣೆಗಾರಿಕೆ ಪೊಲೀಸರದ್ದು.

ಸೈನಿಕರಷ್ಟೇ ಪೊಲೀಸರು 24*7 ಕೆಲಸ ಮಾಡುತ್ತಿದ್ದಾರೆ. ಸೈನಿಕರಿಗಿಂತ ನೀವು ವಿಭಿನ್ನ ಸೈನಿಕರಿಗೆ ಶತ್ರುಗಳು ಕಾಣಿಸುತ್ತಾರೆ. ಕೊಲ್ಲಬೇಕು ಅಥವಾ ಮಡಿಯಬೇಕು. ಪೊಲೀಸರು ಕೊಲ್ಲಲು ಇಲ್ಲ ಕಾನೂನು ಪರಿಪಾಲಕರು. ಸೈನಿಕರಷ್ಟು ಕಠಿಣವಾಗಿ ವರ್ತಿಸುವಾಗಿಲ್ಲ. ಸಾರ್ವಜನಿಕರನ್ನು ಬಂಧುಗಳಂತೆ ನೋಡಬೇಕು.ಕಾನೂನು ವಿರೋಧಿಸುವ ಕ್ರಿಮಿನಲ್‌ ಗಳಿಗೆ ಭಯ ಹುಟ್ಟಿಸಬೇಕು ನಾಗರೀಕರಿಗೆ ಸಜ್ಜನರಿಗೆ ಅಭಯವನ್ನು ನೀಡಬೇಕು. ಕೆಲವು ಪೊಲೀಸರು ಅನಿಷ್ಟತನ ನೋಡಿದಾಗ ಉತ್ತಮ ನಡವಳಿಕೆಯವರು ತಲೆ ತಗ್ಗಿಸಬೇಕಾಗಿದೆ. ಒಮ್ಮೆಯೂ ತಲೆ ತಗ್ಗಿಸುವ ಕೆಲಸ ಮಾಡಬಾರದು. ಯಾವುದೇ ಅಪಚಾರಗಳು ನಮ್ಮಿಂದ ಆಗಬಾರದು. ನಾವು ಅವರ ರಕ್ಷಕರಾಗಬೇಕು. ನಾವು ಯಾರ ಗುಲಾಮರಾಗಬಾರದು ಎಂದು ನುಡಿದರು.

ಬಹಳ ಜನ ಹೇಳುತ್ತಾರೆ ಪೊಲೀಸ್ ಠಾಣೆಗಳು ಮರ್ಯಾದಸ್ಥರು ಹೋಗವ ಸ್ಥಳವಲ್ಲ ಅಂತಾ. ಇಲ್ಲಿ ಹಲವರು ಉನ್ನತ ಶಿಕ್ಷಣ ಪಡೆದವರಿದ್ದಾರೆ. ಈ ತರಬೇತಿ ನೀಡಿರುವುದು ಯಾರಿಗೂ ಹಿಂಸೆ ಕೊಡಲು ಅಲ್ಲ. ಇದು ಜನರ ರಕ್ಷಣೆಗೆ ನೀಡಿರುವ ತರಬೇತಿ. ಸೈಬರ್ ವಿಂಗ್, ಎಫ್‌ಎಸ್‌ಎಲ್ ವಿಭಾಗವನ್ನು ಬಲಪಡಿಸುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಎಫ್.ಎಸ್.ಎಲ್ ಲ್ಯಾಬ್‌ಗೆ ಚಿಂತನೆ ನಡೆಸಿದ್ದೇವೆ. ಉತ್ತಮ ಶಸ್ತ್ರಾಸ್ತ್ರ ನಿಮಗೆ ಕೊಡುತ್ತಿದ್ದೇವೆ. ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಸಾರ್ವಜನಿಕರ ರಕ್ಷಣೆಗೂ ಸಹ ಆಕೆ ಬದ್ದ ಎಂದು ಅರಗ ಜ್ಞಾನೇಂದ್ರ ತಿಳಿಸಿದರು.

ಅಕಾಡೆಮಿ‌ ನಿರ್ದೇಶಕ ವಿಪುಲ್ ಕುಮಾರ್ ಹೊಗಳಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಹೃದಯದಿಂದ ಅಕಾಡೆಮಿಯಲ್ಲಿ ಅಧಿಕಾರಿಗಳು ಕೆಲಸ ಮಾಡಲ್ಲ. ಎಲ್ಲೂ ಸಿಗಲಿಲ್ಲ ಅಂದರೆ ಇಲ್ಲಿ ಓಕೆ ಅನ್ನೋ ವಾತಾವರಣ ಇದೆ. ಆದರೆ ವಿಪುಲ್ ಕುಮಾರ್ ಇಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Key words: mysore- Home Minister -Araga Gnanendra – police

ENGLISH SUMMARY…

Serve for the development of the country, not for salary: Home Minister to trainees
Mysuru, February 2, 2022 (www.justkannada.in): Home Minister Araga Jnanendra advised the police trainees to serve for the cause and development of the country and not for just salary.
He participated in the 45th Police Sub-Inspector’s Civil trainees outgoing parade, held at the Karnataka Police Academy in Mysuru today. He flagged off the parade on the occasion. All the candidates who have completed the training were given an oath and awards were given.
Additional Director General of Police P. Harishekaran, Police Academy Director Vipul Kumar, and other senior police officers were present.
In his address, Home Minister Araga Jnanendra expressed his view that the police forces play a vital role in preventing anti-social elements and crime in society. “Your work should instill fear among the criminals. The number of cyber crimes are increasing in recent days. Please try to increase your knowledge in this area. About 100 new police stations are being constructed in the State this year at an estimated cost of Rs. 200 crores. We are also constructing police quarters. Hence, you should work for the cause of the society, instead of working for a salary,” he said.
Keywords: Home Minister/ Araga Jnanendra/ 45th Sub-Inspector’s Civil trainees/ outgoing parade.