ರಾಷ್ಟ್ರಪತಿಗಳಿಂದ ದಸರಾ ಉದ್ಘಾಟನೆ ಸಂತಸ ತಂದಿದೆ:  ದೇಶದ ಶ್ರೇಯೋಭಿವೃದ್ದಿಗೆ ಪ್ರಾರ್ಥನೆ- ಸಿಎಂ ಬಸವರಾಜ ಬೊಮ್ಮಾಯಿ.

ಮೈಸೂರು,ಸೆಪ್ಟಂಬರ್,26,2022(www.justkannada.in):  ರಾಷ್ಟ್ರಪತಿಗಳು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ್ದು ನಮಗೆ ಸಂತಸ ತಂದಿದೆ. ದೇಶದ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಾಡಹಬ್ಬ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಬಾರಿ ದಸರಾ ಮಹೋತ್ಸವ ಹಲವಾರು ವಿಶೇಷತೆಗಳಿಂದ ಕೂಡಿದೆ. ಗತವೈಭವನ್ನ ನೆನಪು ಮಾಡಿಕೊಳ್ಳುತ್ತಿದ್ದೇವೆ. ನಾಡಿನಲ್ಲಿ ಎಲ್ಲರು ನಾಡಹಬ್ಬವನ್ನ ಆಚರಣೆ ಮಾಡುತ್ತಿದ್ದೇವೆ. ಕಾಲ ಕಾಲಕ್ಕೆ ಆ ದೇವತೆ ಮಳೆ ಬೆಳೆಯನ್ನ ಕೊಟ್ಟು. ಈ ಶಕ್ತಿ ಪೀಠದಿಂದ ನಾಡಿಗೆ ಸುಭೀಕ್ಷೇ ನೀಡುತ್ತಿದ್ದಾಳೆ. ನಮ್ಮ ಗತಕಾಲದ ವೈಭದ ಜೊತೆಗೆ  ಇಂದಿನ ಹತ್ತು ಹಲವಾರು ನೈಸರ್ಗಿಕ ಸವಾಲುಗಳನ್ನು ಎದುರಿಸಿದ್ದೇವೆ. ಈ ವೇಳೆ ರಾಷ್ಟ್ರಪತಿಗಳು ಈ ಕಾರ್ಯಕ್ರಮಕ್ಕೆ ಬಂದಿರೋದು ಬಹಳ ಘನೆತೆ ಹೆಚ್ಚಿಸಿದೆ. ರಾಷ್ಟ್ರಪತಿಗಳನ್ನ ದಸರಾ ಮಹೋತ್ಸವಕ್ಕೆ ಆಹ್ವಾನಿಸಿದ ಕೂಡಲೇ ಒಪ್ಪಿಗೆ ಕೊಟ್ಟರು. ರಾಷ್ಟ್ರಪತಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕದ ಮೂಲಕ ರಾಜ್ಯಗಳ ಪ್ರವಾಸ ಮಾಡುತ್ತಿದ್ದೇನೆ ಅಂದರು. ಇವತ್ತು ಮಹಿಷಾಸುರ ಇಲ್ಲ, ನಮ್ಮ ಮನಗಳಲ್ಲಿರುವ ದುಷ್ಟ ವಿಚಾರಗಳು ಬದಿಗಿಟ್ಟು ಶಿಷ್ಟ ವಿಚಾರಗಳನ್ನು ಮೈಗೂಡಿಸಿಕೊಂಡು ನಾವು ಬಾಳಬೇಕಾಗಿದೆ ಎಂದು ಹೇಳಿದರು.

ದೇವಿಯು ಹಂಸದ ಮೇಲೆ ಕೂತಿದ್ದಾರೆ. ಅದು ಶಾಂತಿಯ ಸಂಕೇತ, ವಿಚಾರದಲ್ಲಿ ಶುದ್ಧತೆ ಸಂಕೇತವಾಗಿದೆ. ಚಾಮುಂಡಿ ತಾಯಿಯ ನೋಡಲು ಎರಡು ಕಣ್ಣು ಸಾಲದು. ಕನ್ನಡ ನಾಡನ್ನ ಎಲ್ಲ ರಂಗದಲ್ಲೂ ಕೂಡ ಸರ್ವ ಶ್ರೇಷ್ಠವಾಗಿ ಕಟ್ಟಲು ಎಲ್ಲರೂ ಪ್ರಯತ್ನ ಮಾಡಬೇಕಾಗಿದೆ. ಅಂತಹ ಸದ್ಬುದ್ಧಿಯನ್ನ ತಾಯಿ ನಮಗೆ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ. ರಾಷ್ಟ್ರಪತಿಗಳಿಗೆ ಸಮಸ್ತ ಕನ್ನಡಿಗರ ಪರವಾಗಿ ಶುಭಾಶಯಗಳನ್ನ ಕೋರುತ್ತೇನೆ  ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: mysore Dussehra- inauguration- President-CM -Basavaraja Bommai.