ಸಿದ್ಧರಾಮಯ್ಯರನ್ನ ಟಚ್ ಮಾಡಿದ್ರೆ ರಾಜ್ಯದ ಜನ ಸುಮ್ಮನಿರಲ್ಲ- ಕೇಂದ್ರ ಸರ್ಕಾರದ ವಿರುದ್ದ ದಿನೇಶ್ ಗುಂಡೂರಾವ್ ವಾಗ್ದಾಳಿ….

ಮೈಸೂರು,ಅ,19,2019(www.justkannada.in):  ಡಿ.ಕೆ ಶಿವಕುಮಾರ್ , ಡಾ.ಜಿ.ಪರಮೇಶ್ವರ್ ಮನೆ ಮೇಲೆ ಐಟಿ ದಾಳಿಯಾಗಿದೆ. ಅದೇ ರೀತಿ ಸಿದ್ಧರಾಮಯ್ಯರನ್ನ ಕಟ್ಟಿ ಹಾಕಲು ಪ್ಲಾನ್ ರೂಪಿಸಲಾಗಿದೆ. ಸಿದ್ಧರಾಮಯ್ಯರನ್ನ ಟಚ್ ಮಾಡಿದ್ರೆ ರಾಜ್ಯದ ಜನ ಸುಮ್ಮನಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರನ್ನ ವಿರೋಧ ಪಕ್ಷ ನಾಯಕರಾಗಿ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ. ಅವರೇ ಸೂಕ್ತ ಎಂದು ಆಯ್ಕೆ ಮಾಡಿದ್ದಾರೆ. ದೆಹಲಿಯಿಂದ ಆಯ್ಕೆ ಸಮಿತಿ ಬಂದಿತ್ತು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದರು,  ಬಳಿಕ  ಸೋನಿಯಾ ಗಾಂಧಿ ಆಯ್ಕೆ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕಿದೆ. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಈ ರಾಜ್ಯದ ಜನತೆ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಬಿಜೆಪಿ ಯಾವುದೇ ಕೆಲಸಗಳನ್ನ ಮಾಡದೇ ಕೇವಲ ಪ್ರಚಾರಗಿಟ್ಟಿಸಿ ಚುನಾವಣೆಗೆ ಹೋಗ್ತಿದೆ. ಸಿದ್ದರಾಮಯ್ಯ ಐದು ವರ್ಷ ರಾಜ್ಯದ ಎಲ್ಲಾ ವರ್ಗದ ಜನರಿಗೂ ಕೆಲಸ ಮಾಡಿದ್ರು. ಆದರೆ ಬಿಜೆಪಿ ವೀರಶೈವ,  ಟಿಪ್ಪು ಜಯಂತಿ ಸದಾಶಿವ ಆಯೋಗ ಅನ್ನೊದನ್ನ ಸಣ್ಣ ಪುಟ್ಟ ವಿಷಯಗಳನ್ನ ತಗೆದುಕೊಂಡು ಜನರಲ್ಲಿ ಗಲಭೆ ಹಬ್ಬಿಸುತ್ತಿದ್ದಾರೆ. I7 ಶಾಸಕರನ್ನ ಕರೆಸಿಕೊಂಡು ಡೆಲ್ಲಿ ಮುಂಬೈ ಗೆ ಕರೆದುಕೊಂಡು ಹೋಗ್ತಾರೆ ಎಂದು ಕಿಡಿಕಾರಿದರು.

ಡಿಕೆಶಿ ಪರಮೇಶ್ವರ್ ಮೇಲೆ ಐಟಿ ಅಸ್ತ್ರ ಬಳಸುತ್ತಾರೆ, ಹಾಗೆಯೆ  ಸಿದ್ದರಾಮಯ್ಯರನ್ನು ಮುಗಿಸಲು ಪ್ರಯತ್ನ ಮಾಡ್ತಾರೆ. ಆದ್ರೆ ಅದು ಸಾಧ್ಯವಿಲ್ಲ. ಸಿದ್ದರಾಮಯ್ಯ ಬಗ್ಗೆಯೂ ಸಂಚು ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದರೂ ಹಣ ನೀಡದೆ,  ಚುನಾವಣೆ ದೃಷ್ಟಿಯಿಂದ ಇದೀಗ ಸ್ವಲ್ಪ ಹಣ ನೀಡಿದ್ದಾರೆ. ಐಟಿ ಅಸ್ತ್ರ ಬಳಸಿ ಎಲ್ಲಾ ವ್ಯವಸ್ಥೆಯನ್ನ ಬಿಜೆಪಿ ಬದಲಾವಣೆ ಮಾಡ್ತಿದೆ. ಇತ್ತೀಚೆಗೆ ನ್ಯಾಯಾಲಯದ ಮೇಲೂ ನಂಬಿಕೆ ಹೋಗಿದೆ ಎಂದು ದಿನೇಶ್ ಗುಂಡುರಾವ್ ತಿಳಿಸಿದರು.

ದೇಶದಲ್ಲಿ ಬಿಜೆಪಿ ಭಯದ ವಾತಾವರಣ ಉಂಟುಮಾಡಿದೆ. ಕಾಂಗ್ರೆಸ್ ನಾಯಕರನ್ನ ಕಟ್ಟಿ ಹಾಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಆದರೆ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ.ರಾಜ್ಯದಲ್ಲಿ  ಕಾಂಗ್ರೆಸ್ ಗಟ್ಟಿಯಾಗಿದೆ. ಹುಣಸೂರು, ಕೆ. ಆರ್ ಪೇಟೆ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ದೇಶದ್ರೋಹಿಗಳಿಗೆ ಭಾರತ ರತ್ನ ನೀಡಲು ಮುಂದಾಗಿದ್ದಾರೆ. ಗಾಂಧಿ ಕೊಂದವರನ್ನ  ದೇಶಪ್ರೇಮಿ ಅನ್ನುತ್ತಾರೆ ಎಂದು  ಹರಿಹಾಯ್ದ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಸಹಾಯಕ ರಾಗಿದ್ದಾರೆ. ನಿಮಗೆ ಅಧಿಕಾರ ನಡೆಸಲು ಆಗದಿದ್ದರೆ ನಮ್ಮವರನ್ನ ಬಿಡಿ ಹಣ ತರ್ತೇವೆ, ಆಡಳಿತ ನಡೆಸುತ್ತೇವೆ ಎಂದು ಗುಡುಗಿದರು.

Key words:  mysore-Dinesh gundurao-siddaramaiah – touch -central government