ಮೈಸೂರು: ಬಂದ್ ಬೆಂಬಲಿಸದ ದೇವರಾಜ ಮಾರುಕಟ್ಟೆ ವರ್ತಕರು, ಎಪಿಎಂಸಿಯಲ್ಲಿ ವಹಿವಾಟು ಸ್ಥಗಿತ

ಮೈಸೂರು, ಸೆಪ್ಟೆಂಬರ್ 28, 2020 (www.justkannada.in): ಇಂದು ಕರೆ ನೀಡಿರುವ ಬಂದ್ ಗೆ ದೇವರಾಜ ಮಾರುಕಟ್ಟೆ ವರ್ತಕರು ಬೆಂಬಲ ನೀಡಿಲ್ಲ.

ಹೀಗಾಗಿ ದೇವರಾಜ ಮಾರುಕಟ್ಟೆ ಅಂಗಡಿಗಳು ಎಂದಿನಂತೆ ತೆರೆದಿವೆ. ಆದರೆ ಅಂಗಡಿಗಳು ತೆರೆದಿದ್ದರೂ ಮಾರುಕಟ್ಟೆಯತ್ತ ಜನ ಸುಳಿಯುತ್ತಿಲ್ಲ. ಇಂದಿನ ಬಂದ್ ಗೆ ಬೆಂಬಲ್ಲವಿಲ್ಲ ಎಂದು ಮಾರುಕಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ. ಸಾರ್ವಜನಿರಿಲ್ಲದೇ ದೇವರಾಜ ಮಾರುಕಟ್ಟೆ ವ್ಯಾಪಾರ ವಹಿವಾಟು ಡಲ್ ಹೊಡೆದಿದೆ.

ಬೆಳಗ್ಗೆ 6 ಗಂಟೆಯಿಂದ ಅಂಗಡಿಳನ್ನು ತೆರದಿದ್ದರೂ ಮಾರುಕಟ್ಟೆಯತ್ತ ಜನ ಬರುತ್ತಿಲ್ಲವೆಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಅಂಗಡಿಗಳು ರಾತ್ರಿಯವರೆಗೂ ತೆರೆದಿರಲಿದ್ದು ಹಾಗಾಗಿ ಸಾರ್ವಜನಿಕರು ಮಾರುಕಟ್ಟೆ ಬಂದು ವ್ಯಾಪಾರ ನಡೆಸುವಂತೆ ವ್ಯಾಪಾರಿಗಳ ಮನವಿ ಮಾಡಿದ್ದಾರೆ.

ಎಪಿಎಂಸಿಯಲ್ಲಿ ಬೆಂಬಲ: ಮೈಸೂರಿನ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿದೆ. ಬಾಗಿಲು ಮುಚ್ಚಿದ ಮಳಿಗೆಗಳು ಇದರಿಂದ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ದಿನಸಿ, ತರಕಾರಿ, ಸಗಟು ಸೇರಿದಂತೆ ಎಲ್ಲ ಅಂಗಡಿಗಳಿಗೂ ಬೀಗ ಹಾಕಲಾಗಿದೆ.

ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ಹೋರಾಟಕ್ಕೆ ಬೆಂಬಲ ನೀಡಿವೆ. ಎಪಿಎಂಸಿಯಲ್ಲಿ ಸದಸ್ಯರು,ವರ್ತಕರು ಮತ್ತು ದಲ್ಲಾಳಿಗಳ ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳಕ್ಕೆ ಮೈಸೂರು ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಪ್ರತಿಭಟನಕಾರರಿಗೆ ಎಸ್ಪಿ ಸೂಚನೆ ನೀಡಿದ್ದಾರೆ.