Sunday, August 2, 2026

BDA Apartments

Home Front Page ಹೊಸ ಸಿಎಂ ಆಯ್ಕೆಯಲ್ಲಿ ಅಚ್ಚರಿ ಆಯ್ಕೆ ಆಗಬಹುದು- ಬಿಎಸ್ ವೈ ಪುತ್ರ ಬಿವೈ ರಾಘವೇಂದ್ರ.

ಹೊಸ ಸಿಎಂ ಆಯ್ಕೆಯಲ್ಲಿ ಅಚ್ಚರಿ ಆಯ್ಕೆ ಆಗಬಹುದು- ಬಿಎಸ್ ವೈ ಪುತ್ರ ಬಿವೈ ರಾಘವೇಂದ್ರ.

ಬೆಂಗಳೂರು,ಜುಲೈ,27,2021(www.justkannada.in):  ಸಿಎಂ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ ನೀಡಿದ ಬೆನ್ನಲ್ಲೆ ನೂತನ ಮುಖ್ಯಮಂತ್ರಿ ಆಯ್ಕೆಗೆ ಹೈಕಮಾಂಡ್ ಕಸರತ್ತು ನಡೆಸುತ್ತಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ, ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಹೊಸ ಸಿಎಂ ಆಯ್ಕೆಯಲ್ಲಿ ಅಚ್ಚರಿ ಆಯ್ಕೆ ಆಗಬಹುದು ಎಂದು ಹೇಳಿದ್ದಾರೆ.jk

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಬಿವೈ ರಾಘವೇಂದ್ರ, ಹೊಸ ಸಿಎಂ ಆಯ್ಕೆಯಲ್ಲಿ ಅಚ್ಚರಿ ಆಯ್ಕೆ ಆಗಬಹುದು. ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿಯಲ್ಲಿ ಫಡ್ನವಿಸ್, ಯೋಗಿ ಮಾದರಿಯಲ್ಲಿ ರಾಜ್ಯದಲ್ಲೂ ಅಚ್ಚರಿ ಆಯ್ಕೆಯಾಗಬಹುದು ಎಂದರು.

ಸಚಿವ ಸಂಪುಟದಲ್ಲಿ ಬಿಎಸ್ ವೈ ಪಾತ್ರವೇ ಇಲ್ಲ: ಇನ್ನು ಅವರ ಮಕ್ಕಳ ಪಾತ್ರ ಎಲ್ಲಿಂದ ಬರುತ್ತೆ…?

ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಕ್ಕೆ ಬಿಎಸ್ ವೈ ಸಂಕಲ್ಪ ಮಾಡಿದ್ದರು. ಅದರಂತೆ ನಿನ್ನೆ ಯಡಿಯೂರಪ್ಪ ರಾಜೀನಾಮೆ ನೀಡಿದರು. ಸಚಿವ ಸಂಪುಟದಲ್ಲಿ ಯಡಿಯೂರಪ್ಪನವರ ಪಾತ್ರವೇ ಇಲ್ಲ. ಇನ್ನು ಅವರ ಮಕ್ಕಳ ಪಾತ್ರ ಎಲ್ಲಿಂದ ಬರುತ್ತೆ. ಬಿ.ವೈ.ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಪಕ್ಷದ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

Key words: new CM- option – surprise- MP-BY Raghavendra