ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರನ್ನ ಹಿಟ್ಲರ್ ಗೆ ಹೋಲಿಸಿದ ಕಾಂಗ್ರೆಸ್ ಶಾಸಕ…

ಮೈಸೂರು,ನವೆಂಬರ್,27,2020(www.justkannada.in): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಹುಣಸೂರು ಶಾಸಕ ಎಚ್ ಪಿ ಮಂಜುನಾಥ್ ನಡುವಿನ ಜಟಾಪಟಿ ಮುಂದುವರೆದಿದೆ.  ಇದೀಗ ಮತ್ತೆ ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಶಾಸಕ ಹೆಚ್.ಪಿ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.I didn't knew CM BSY will think so cheaply - KPCC President D.K. Shivakumar

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಶಾಸಕ ಹೆಚ್.ಪಿ ಮಂಜುನಾಥ್ ಹಿಟ್ಲರ್ ಗೆ ಹೋಲಿಸಿದ್ದಾರೆ. ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹೆಚ್.ಪಿ ಮಂಜುನಾಥ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ. ಕೆಡಿಪಿಯಲ್ಲಿ ಸಭೆಯಲ್ಲಿ ಶಾಸಕರು ಜನಪ್ರತಿನಿಧಿಗಳು ಪ್ರಶ್ನೆ ಮಾಡೋದು ಸಹಜ. ಅದಕ್ಕೆ ಮುಂದಿನ ಸಭೆಯಲ್ಲಿ ಅದಕ್ಕೆ ಉತ್ತರಿಸೋದು ಸಹಜ. ನಾನು ಪ್ರಶ್ನೆ ಮಾಡಿದ್ದು ನಿಜ. ಆದ್ರೆ ಡಿಸಿಯವರು ಅದನ್ನ ಪರ್ಸನಲ್ ಆಗಿ ತಗೊಂಡಿದ್ದಾರೆ. ತೀರ ವೈಯುಕ್ತಿಕವಾಗಿ ತೆಗೆದುಕೊಂಡು ಮರುದಿನವೇ ಪತ್ರ ಬರೆದಿದ್ದಾರೆ. ಆದ್ರೆ ಎರಡು ದಿನವಾದ್ರು ನನಗೆ ಪತ್ರ ನನಗೆ ತಲುಪಿಲ್ಲ. ಅವರು ಸಾಮಾಜಿಕ ‌ಜಾಲತಾಣದಲ್ಲಿ ಪ್ರಖ್ಯಾತರಾಗಿದ್ದಾರೆ.  ಅದು  ನನಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನನ್ನ ಪಿ.ಎ ಗಾಗಲಿ, ನನ್ನ ಕಚೇರಿಗಾಗಲಿ, ನನ್ನ ಮನೆಗಾಗಲಿ ಬಂದಿಲ್ಲ. ಡಿಸಿಯೊಬ್ಬರು ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ. ಕಾನೂನು ಮೀರಿ ವರ್ತಿಸಿದ್ದಾರೆ. ಒಬ್ಬ ಅಧಿಕಾರಿಯಾಗಿ ಜನಪ್ರತಿನಿಧಿಗಳ ಜೊತೆ ಹೀಗೆ ನಡೆದುಕೊಳ್ಳುತ್ತಾರಾ? ಎಂದು ಡಿಸಿ ರೋಹಿಣಿ ಸಿಂಧೂರಿ,

ಅವರು ಪಬ್ಲಿಕ್ ಸರ್ವೇಂಟ್. ಡಿಕ್ಟೇಟರ್ ಅಲ್ಲ….

ಜಿಲ್ಲಾಧಿಕಾರಿ ನೇರವಾಗಿ ನನಗೆ ಪತ್ರ ಬರೆದಿದ್ದಾರೆ. ಪತ್ರ ಬರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಪತ್ರ ಎಲ್ಲಿಗೆ ತಲುಪಿಸಿದ್ದಾರೆ ಗೊತ್ತಿಲ್ಲ. ನನಗೆ ಬರೆದ ಪತ್ರವನ್ನು ಮಾಧ್ಯಮ, ಸಾರ್ವಜನಿಕರಿಗೆ ತಲುಪುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನನಗೆ ಪತ್ರ ಸಿಕ್ಕಿದೆ. ಜನಪ್ರತಿನಿಧಿಗೆ ನೋಟಿಸ್ ರೀತಿ ಪತ್ರ ಕೊಟ್ಟಿದ್ದಾರೆ ಅವರು ಪಬ್ಲಿಕ್ ಸರ್ವೇಂಟ್. ಡಿಕ್ಟೇಟರ್ ಅಲ್ಲ ಎಂದು ಹೆಚ್.ಪಿ ಮಂಜುನಾಥ್ ಹರಿಹಾಯ್ದರು.

ನನ್ನನ್ನ ಕರೆಯಬಾರದು ಅಂತ ನಿಮಗೆ ಯಾರಾದ್ರು ಹೇಳಿದ್ರಾ?.

ಗಜಪಯಣ ಕಾರ್ಯಕ್ರಮದಲ್ಲಿ ಆಹ್ವಾನಿಸದ ಬಗ್ಗೆ ಪ್ರತಿಕ್ರಿಯಿಸಿ ಡಿಸಿ ವಿರುದ್ಧ ಗುಡುಗಿದ ಹೆಚ್.ಪಿ ಮಂಜುನಾಥ್, ಗಜಪಯಣ ಕಾರ್ಯಕ್ರಮದಲ್ಲಿ ಜನಪ್ರತಿನಿಧಿ ಕರೆಯಬಾರದು ಅಂತ ಯಾರು ಸೂಚನೆ ಕೊಟ್ಟಿದ್ದಾರೆ. ಹುಣಸೂರು ಜನಪ್ರತಿನಿಧಿಗಳಿಗೆ ಆಹ್ವಾನ ಇಲ್ಲ ಅನ್ನೋದಾದರೆ ಅರಮನೆ ಗಜಸ್ವಾಗತ ಕಾರ್ಯಕ್ರಮಕ್ಕೆ ಯಾಕೇ ಆಹ್ವಾನ ನೀಡಿದ್ರಿ. ಅಲ್ಲಿಗೆ ಎಂಎಲ್‌ಎ, ಎಂಎಲ್‌ಸಿ ಸಚಿವರು ಎಲ್ಲ ಬಂದಿದ್ರಲ್ಲ ಅದು ಹೇಗೆ ಸಾಧ್ಯ ಆಯ್ತು. ಅದಕ್ಕೆ ಯಾರು ಅನುಮತಿ ಕೊಟ್ರು. ನನ್ನನ್ನ ಕರೆಯಬಾರದು ಅಂತ ನಿಮಗೆ ಯಾರಾದ್ರು ಹೇಳಿದ್ರಾ? ಬಿಜೆಪಿಯವರು ಇದನ್ನ ಹೇಳಿಕೊಟ್ಟಿದ್ದಾರಾ ಅಂತ ಕೇಳಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ರೋಹಿಣಿ ಸಿಂಧೂರಿಯವರು ಎಲ್ಲ‌ ಕಡೆ ಜನಪ್ರತಿನಿಧಿಗಳಿಗೆ ಪರ್ಯಾಯವಾಗಿ ಕಾರ್ಯಕ್ರಮ ಮಾಡ್ತಿದ್ದಾರೆ. ಇದು ಮಂಡ್ಯ ಹಾಸನದಲ್ಲೂ ನಡೆದಿದೆ. ಮೈಸೂರಿನಲ್ಲಿ ಇದೀಗ ಆ ಸಂಸ್ಕೃತಿ ಉದ್ಭವ  ಆಗುತ್ತಿದೆ. ರೋಹಿಣಿ ಸಿಂಧೂರಿಯವರು ಜನಪ್ರತಿನಿಧಿಗಳ ಹಕ್ಕನ್ನ ಉಲ್ಲಂಘಿಸಿದ್ದಾರೆ ಎಂದು ಹೆಚ್.ಪಿ ಮಂಜುನಾಥ್ ಆರೋಪಿಸಿದರು.

ನನ್ನನ್ನ‌ ಎದುರಿಸುವ  ಭ್ರಮೆಯಿಂದ ಹೊರಗೆ ಬನ್ನಿ

ನನಗೆ ಬ್ಲಾಕ್ ಮೇಲ್ ರೀತಿಯಲ್ಲಿ ಪತ್ರ ಬರೆದಿದ್ದಾರೆ. ರೋಹಿಣಿ ಸಿಂಧೂರಿಯವರ ನನಗೆ ಪರೋಕ್ಷವಾಗಿ ಬೆದರಿಕೆ ಹಾಕ್ತಿದ್ದಾರೆ. ನಿಮ್ಮ ಫೈಲ್‌ಗಳು ನನ್ನ ಬಳಿ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ನನಗೆ ಪತ್ರ ಬರೆದು ಜಿಲ್ಲೆಯ ಜನಪ್ರತಿನಿಧಿಗಳು ಬಾಯಿ ಮುಚ್ಚಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಇದು ನನ್ನೊಬ್ಬನಿಗೆ ಬರೆದ ಪತ್ರವಲ್ಲ. ಕೆಡಿಪಿ ಸಭೆಯಲ್ಲಿ ಆದ ಚರ್ಚೆಗೆ ನನ್ನ ಜಮೀನು ವಿಚಾರ ಬರೆದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ.ನಮ್ಮ ಅಪ್ಪನ ಆಸ್ತಿ ತಗೋಳೋದು ನಮಗೆ ಗೊತ್ತಿದೆ. ಈ ಬೆದರಿಕೆ ತಂತ್ರಕ್ಕೆ‌ನಾನು‌ ಹೆದರೋಲ್ಲ. ನನ್ನನ್ನ‌ ಎದುರಿಸುವ  ಭ್ರಮೆಯಿಂದ ಹೊರಗೆ ಬನ್ನಿ ಎಂದು ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಟಾಂಗ್ ನೀಡಿದರು.

ಎರಡು ರಾಜ್ಯದ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗೆ ಇದ್ದಾರೊ, ಕಾಲ ಕೆಳಗೆ ಇದ್ದಾರೊ ಗೊತ್ತಿಲ್ಲ.

ನನ್ನ ಕಾನೂನಾತ್ಮಕವಾಗಿ ಜಮೀನಿನ ಅಲಿನೇಷನ್ ಗೆ ಅರ್ಜಿ ಸಲ್ಲಿಸಿದ್ದೇನೆ. ನಾವೂ ಕೂಡ ಶಾಸಕರು. ಟೈಮ್ ಯಾವಾಗಲೂ ಹೀಗೆ ಇರೋಲ್ಲ. ಎರಡು ರಾಜ್ಯದ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗೆ ಇದ್ದಾರೊ, ಕಾಲ ಕೆಳಗೆ ಇದ್ದಾರೊ ಗೊತ್ತಿಲ್ಲ ಎಂದು ಲೇವಡಿ ಮಾಡಿದ ಹೆಚ್.ಪಿ ಮಂಜುನಾಥ್ ಮೈಸೂರು ಜಿಲ್ಲೆ ನಂದೇ ಎಂದುಕೊಳ್ಳಬೇಡಿ.  ನಿಮ್ಮನ್ನೂ ಪ್ರಶ್ನೆ ಮಾಡುವರರು ಇರುತ್ತಾರೆ. ಕಾನೂನು ಎಲ್ಲರಿಗೂ ಒಂದೆ. ನಿಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳಿ. ನನ್ನ ವೈಯಕ್ತಿಕ ವಿಚಾರ ಏನು ಕೇಳೋದಿಲ್ಲ. ಜಿಲ್ಲೆಯ ಶೇ 75. ಅಧಿಕಾರಿಗಳಿಗೆ ಭಯ ಇದೆ. ನೀವು ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿ ಜಗಜ್ಜಾಹೀರಾಗಿದೆ ಎಂದು ರೋಹಿಣಿ ಸಿಂದೂರಿ ಅವರ ವಿರುದ್ದ ಕಿಡಿಕಾರಿದರು.

ನಾನು ಹಿರಿಯ ಸಲಹೆ ಪಡೆದು ಕಾನೂನಾತ್ಮಕವಾಗಿ ಹೋರಾಟ…

ರೋಹಿಣಿ ಸಿಂಧೂರಿಯವರೇ ಕಾನೂನಿನ ಪ್ರಕ್ರಿಯೆಯಲ್ಲಿ ನೀವು ಒಂದು ದಿನ‌ ಸಿಲುಕುತ್ತೀರಾ? ಆಗ ನಿಮಗೆ ಕಾನೂನಿನ ಅರಿವಾಗುತ್ತದೆ. ನೀವು ಕಾನೂನಿಗಿಂತ ದೊಡ್ಡವರಲ್ಲ. ನಿಮ್ಮನ್ನ ಪ್ರಶ್ನೆ ಮಾಡೋಕು ನಿಮ್ಮ ಮೇಲೆ ಅಧಿಕಾರಿಗಳಿದ್ದಾರೆ. ಅವರಗೂ ನೀವು ಉತ್ತರ‌ ಕೊಡಬೇಕು. ನಾನು ಹಿರಿಯ ಸಲಹೆ ಪಡೆದು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಶಿಷ್ಟಾಚಾರ ಉಲ್ಲಂಘನೆ, ಪತ್ರ ಬರೆದಿರುವುದು ಎಲ್ಲದರ ಕುರಿತು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.mysore-dc-rohini-sindhuri-hitler-mla-hp-manjunath-compare

ಮಹಾರಾಣಿ ಅಂದಿದ್ದರಲ್ಲಿ ತಪ್ಪೇನು.?

ಒಬ್ಬ ಶಾಸಕರಿಗೆ ಶೋಭೆತರುವಂತದ್ದಲ್ಲ ಎಂದು ಹೇಳಿದ್ದೀರಿ. ನಮಗೆ ಪಾಠ ಮಾಡಲು ಬರಬೇಡಿ. ನಾನು ಮಹಾರಾಣಿ ಅಂದಿದ್ದರಲ್ಲಿ ತಪ್ಪೇನು.? ನಾನು ಹೊರಗೆ ಮಾಧ್ಯಮದ ಮುಂದೆ ಮಾತಾನಾಡುವಾಗ ಫ್ಲೋನಲ್ಲಿ  ವರ್ಡ್ ಬಂದಿದೆ ಅಷ್ಟೇ. ವೈಯಕ್ತಿವಾಗಿ ನಾನು ಏನೂ ಮಾತನಾಡಿಲ್ಲ ಎಂದು ಮಹಾರಾಣಿ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ  ಶಾಸಕ ಯತೀಂದ್ರ, ಪರಿಷತ್ ಸದಸ್ಯ ಧರ್ಮಸೇನಾ. ರಘು ಆಚಾರ್ ಭಾಗಿಯಾಗಿದ್ದರು.

English summary……

Mysuru MLA compares Mysuru DC Rohini Sindhoori to Hitler
Mysuru, Nov. 27, 2020 (www.justkannada.in): In his continued tirade against Mysuru DC Rohini Sindhoori, MLA H.P. Manjunath has yet again expressed his dissatisfaction by comparing her to Hitler.mysore-dc-rohini-sindhuri-hitler-mla-hp-manjunath-compare
Speaking at a press meet held in Mysuru, H.P. Manjunath said that the Mysuru DC is behaving like Hitler. “Elected representatives asking questions in KDP meetings is common. Accordingly I have also asked a question, but she has taken it personally. She appears to be social media savvy, hence the letter written by her did not reach me. It seems that she has managed that the letter reaches the public directly through the social media. I also got to know about it only through internet. Her letter appears like a notice. She is just a public servant, not a dictator,” he said.
Keywords: Mysuru DC/MLA H.P. Manjunath/Hitler

Key words:  Mysore DC- Rohini Sindhuri – Hitler-  MLA HP Manjunath- compare