Sunday, August 23, 2026

BDA Apartments

Home Front Page ಸಾರಾ ಮಹೇಶ್ ವಿರುದ್ಧ ಹರಿಹಾಯ್ದ ಜಿಟಿ ದೇವೇಗೌಡ

ಸಾರಾ ಮಹೇಶ್ ವಿರುದ್ಧ ಹರಿಹಾಯ್ದ ಜಿಟಿ ದೇವೇಗೌಡ

ಮೈಸೂರು, ಮೇ 21, 2020 (www.justkannada.in): ಮೈಮುಲ್ ಆಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾ.ರಾ.ಮಹೇಶ್’ಗೆ ಎಲ್ಲ ಗೊತ್ತು. ಅವನಿಗಿರುವಷ್ಟು ಬುದ್ದಿವಂತಿಕೆ ನನಗೆ ಇಲ್ಲ ಎಂದು ಶಾಸಕ ಜಿಟಿ ದೇವೇಗೌಡ ವ್ಯಂಗ್ಯವಾಡಿದ್ದಾರೆ.

ಸ್ವಪಕ್ಷದ ಶಾಸಕನ ವಿರುದ್ಧವೇ ಶಾಸಕ ಜಿಟಿ ದೇವೇಗೌಡ ತೀರುಗೇಟು ನೀಡಿದ್ದಾರೆ. ಗ್ರಾಮ ಪಂಚಾಯತ್ ತಾಲ್ಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಸದಸ್ಯರು ಅವರವರ ಕೆಲಸ ಮಾಡುವುದಕ್ಕೆ ನಾನು ಬಿಡುತ್ತೀನಿ. ಆದರೆ ನಾನೇ ಎಲ್ಲವನ್ನು ಮಾಡಬೇಕು ಎನ್ನುವುದು ಸಾರಾ ಮಹೇಶ್ ಬುದ್ಧಿ. ಅವನಿಗೆ ಗೊತ್ತು ಎಲ್ಲಿ ಏನ್ ಆಗಿದೆ ಅಂತ ಎಂದು ಟೀಕಿಸಿದ್ದಾರೆ.

ಸಾರಾ ಮಹೇಶ್ ಎನ್ ಕೆಲಸ ಮಾಡುತ್ತಾನೆ ಅಂತ ಎಲ್ಲರಿಗೂ ಗೊತ್ತು. ಮೈಮುಲ್, ಡಿಸಿಸಿ ಬ್ಯಾಂಕ್ ಮುಂತಾದವು ಸ್ವಯತ್ತ ಸಂಸ್ಥೆಗಳು.
ಆದರ ನಿರ್ವಹಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಎಲ್ಲವನ್ನೂ ನಾನ್ಯಕೆ ಮಾಡಲಿ. ನನಗ ಮಾಡೋದಕ್ಕೆ ಬೇರೆ ಕೆಲಸ ಇಲ್ವ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವುದಕ್ಕೆ ನಾನು ಸಾರಾ ಮಹೇಶ್ ಅಲ್ಲ ಎಂದು ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.