ಬಿಎಂಟಿಸಿ ಬಸ್ ಹರಿದು 15 ವರ್ಷದ ಬಾಲಕಿ ದುರ್ಮರಣ.

ಬೆಂಗಳೂರು,ನವೆಂಬರ್,22,2022(www.justkannada.in):  ಬಿಎಂಟಿಸಿ ಬಸ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಕೆಆರ್ ಪುರಂನ  ಟಿಸಿ ಪಾಳ್ಯದ ಭಟ್ಟರಹಳ್ಳಿಯಲ್ಲಿ ಈ ಘಟನೆ ನಡೆದಿದೆ.  15 ವರ್ಷದ ಲಾವ್ಯಶ್ರೀ ಮೃತ ಬಾಲಕಿ. ತಾಯಿ ಪ್ರಿಯದರ್ಶಿನಿ ಜತೆ  ಬಾಲಕಿ ಲಾವ್ಯಶ್ರೀ  ಪುತ್ರ ಯಾಶ್ವಿನ್  ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ  ಸಿಗ್ನಲ್ ಬಳಿ ದ್ವಿಚಕ್ರ ವಾಹನ ಸ್ಕಿಡ್  ಆಗಿ ಬಿದ್ದಿದೆ.  ಈ ಸಮಯದಲ್ಲಿ ತಾಯಿ ಪ್ರಿಯದರ್ಶಿನಿ ಹಾಗೂ ಯಾಶ್ವಿನ್ ಎಡಗಡೆಗೆ ಬಿದ್ದಿದ್ದಾರೆ.

ಈ ವೇಳೆ ಬಲಗಡೆ ಬಿದ್ದ ಲಾವ್ಯಶ್ರೀ  ಮೇಲೆ  ಬಿಎಂಟಿಸಿ ಬಸ್ ಹರಿದಿದ್ದು ಬಾಲಕ ಸಾವನ್ನಪ್ಪಿದ್ದಾಳೆ. ಗಾಯಾಳು ತಾಯಿ ಮಗನನ್ನ ಸ್ಥಳೀಯರು  ಆಸ್ಪತ್ರೆಗೆ ದಾಖಲಿಸಿದ್ದಾರೆ.  ಕೆಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  BMTC-BUS-girl-death