ಮೈಸೂರು ಕೋರ್ಟ್ ಆವರಣದಲ್ಲಿ ಹೈಡ್ರಾಮಾ: ಬೆಳಿಗ್ಗೆ 10.30ಕ್ಕೆ ನಾಮಫಲಕ ಅನಾವರಣ, 11ಕ್ಕೆ ತೆರವು.

ಮೈಸೂರು,ನವೆಂಬರ್,27,2021(www.justkannada.in): ಮೈಸೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ಇಂದು ಹೈಡ್ರಾಮಾ ನಡೆದಿದ್ದು ಬೆಳಿಗ್ಗೆ 10.30ಕ್ಕೆ ಅಳವಡಿಸಲಾಗಿದ್ದ ನಾಮಫಲಕವನ್ನ  ಬೆಳಿಗ್ಗೆ 11 ಗಂಟೆಗೆ ತೆರವುಗೊಳಿಸಿರುವ ಘಟನೆ ನಡೆದಿದೆ.

ಬೆಳಗ್ಗೆ 10.30ರಂದು  ಜಿಲ್ಲಾ ನ್ಯಾಯಾಲಯ ಆವರಣದ ವಿಸ್ತೃತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತ್ತು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಮತ್ತು ಇತರ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಮಧ್ಯೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೋರ್ಟ್ ಆವರಣ ಗೊಂದಲದ ಗೂಡಾದ ಘಟನೆ ನಡೆದಿದೆ. ವಿಸ್ತೃತ ಕಟ್ಟಡಕ್ಕೆ ಶಿಲಾನ್ಯಾಸದ ನೆಪದಲ್ಲಿ ಹಳೇ ಕಟ್ಟಡಕ್ಕೆ ನಾಮಫಲಕ ಹಾಕಲಾಗಿದೆ. ಜತೆಗೆ ಸಂಘದ ಚುನಾವಣೆಗೆ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಹಂತದಲ್ಲಿ ಶಿಲಾನ್ಯಾಸ ಮಾಡಿದ್ದು ನೀತಿಸಂಹಿತೆ ಉಲ್ಲಂಘನೆ ಎಂಬುದು ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಕೀಲರ ವಾದವಾಗಿದೆ. ಒಟ್ಟಾರೆ ಜಿಲ್ಲಾ ವಕೀಲರ ಸಂಘದ ಮುಸುಕಿನ ಗುದ್ದಾಟ ಶಿಲಾನ್ಯಾಸದ ಮೂಲಕ ಬಹಿರಂಗವಾಗಿದೆ.

Key words: mysore court- Hydrama – Mysore Court –  Nominal- unveiling – 10:30 am,- clearing – 11am.