ಪಾಲಿಕೆ ಸದಸ್ಯ, ಜಿ.ಪಂ ಮಹಿಳಾ ಸದಸ್ಯೆಗೆ ವಕ್ಕರಿಸಿದ ಕೊರೋನಾ: ಮೈಸೂರಿನಲ್ಲಿಂದು 300ಕ್ಕೂ ಹೆಚ್ಚು ಪಾಸಿಟಿವ್ ಕೇಸ್..?

ಮೈಸೂರು,ಜು,30,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದು ಈ ನಡುವೆ ಇಂದು ಕೊರೋನಾ ಸೋಂಕಿತರ ಸಂಖ್ಯೆ ತ್ರಿಶತಕ ಬಾರಿಸುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್, ಪಾಲಿಕೆ ಸದಸ್ಯ, ಜಿ.ಪಂ ಮಹಿಳಾ ಸದಸ್ಯೆ, ಸೇರಿದಂತೆ ಜೈಲಿನ ಹಕ್ಕಿಗಳಿಗೂ  ಮಹಾಮಾರಿ ಕೊರೋನಾ ವಕ್ಕರಿಸಿದ್ದು, ಜೆ.ಕೆ‌.ಟೈರ್ಸ್ ಹಾಗೂ ರೈಲ್ವೆ ಇಲಾಖೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಮೈಸೂರು ಜನತೆಯಲ್ಲಿ ಆತಂಕ ಮನೆ ಮಾಡಿದೆ.mysore-corona-positive-case-300

ಜಿಲ್ಲೆಯಲ್ಲಿ ಇತ್ತೀಚೆಗೆ ನಿತ್ಯವೂ  200ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್  ಪ್ರಕರಣ ದಾಖಲಾಗುತ್ತಿದ್ದವು. ಆದರೆ ಇಂದು ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಭಾರಿಸುವ ಸಾಧ್ಯತೆ ಇದೆ. 300ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಬರುವ ಸಾಧ್ಯತೆ ಇದೆ.

Key words: mysore-corona positive-case-300