ಮೈಸೂರಿನ ಮೇಯರ್ ಮೀಸಲಾತಿ ಎಸ್.ಟಿ ವರ್ಗಕ್ಕೆ ಅನ್ಯಾಯ- ಪಡುವಾರಹಳ್ಳಿ ಎಂ ರಾಮಕೃಷ್ಣ ಆರೋಪ…

ಮೈಸೂರು,ಫೆಬ್ರವರಿ,12,2021(www.justkannada.in): ರಾಜ್ಯ ಸರ್ಕಾರದ ಪ್ರಕಟಿಸಿರುವ ಮೈಸೂರು ನಗರಪಾಲಿಕೆ ಮೇಯರ್ ಮೀಸಲಾತಿಯು ಎಸ್ ಟಿ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ ಆರೋಪಿಸಿದ್ದಾರೆ.jk

1983 ರಿಂದ ಇಲ್ಲಿಯವರೆಗೆ ಮೈಸೂರಿನ ಮೂಲನಿವಾಸಿಗಳಾದ ನಾಯಕ ಜನಾಂಗದ ಪಾಲಿಕೆಯ ಸದಸ್ಯರು ಮಹಾಪೌರ ಸ್ಥಾನ ಆಲಂಕರಿಸಿಲ್ಲ. ಆದ್ದರಿಂದ ಈ ಬಾರಿಯ ಮೀಸಲಾತಿ ಪ.ಪಂಗಡಕ್ಕೆ ಮೀಸಲಾತಿ ನೀಡುವಂತೆ ಮೈಸೂರು ಭಾಗದ ನಾಯಕ ಸಮಾಜದ ಒಕ್ಕೊರಲಿನಿಂದ ರಾಜ್ಯ ಸರ್ಕಾರದ ಹಾಗೂ ಬಿಜೆಪಿಯ ನಾಯಕರಿಗೆ ಪ್ರತಿಭಟನೆ ಮನವಿಯ ಮೂಲಕ ಒತ್ತಡ ಹೇರುವ ಪ್ರಯತ್ನ ನಿರಂತರವಾಗಿ ಮಾಡಿದ್ದರೂ ಸಹಾ ನಮ್ಮ ಬೇಡಿಕೆಯನ್ನು ಕಡೆಗಣಿಸಿ ನಾಯಕ ವಿರೋಧಿನೀತಿಯನ್ನು ಅನುಸರಿಸಿದೆ ಎಂದು ಪಡುವಾರಹಳ್ಳಿ ರಾಮಕೃಷ್ಣ ಅವರು ಆರೋಪಿಸಿದರು.mysore-city-corporation-reservation-st-paduwarahalli-m-ramakrishna

ಹೀಗಾಗಿ ಮಾನ್ಯ ಮುಖ್ಯಮಂತ್ರಿಗಳಾದ  ಯಡಿಯೂರಪ್ಪ ಅವರು ಮೀಸಲಾತಿ ಬದಲಿಸಿ ಎಸ್ ಟಿಗೆ ನಿಗದಿಪಡಿಸುವ ಮೂಲಕ ನಾಯಕ ಜನಾಂಗಕ್ಕೆ ಮಹಾಪೌರ ಹುದ್ದೆ ದೊರಕಲು ಕ್ರಮವಹಿಸಬೇಕು ಈ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಡುವಂತೆ ಪಡುವಾರಹಳ್ಳಿ ಎಂ ರಾಮಕೃಷ್ಣ ರವರು ಮನವಿ ಮಾಡಿದ್ದಾರೆ.

Key words: Mysore-city corporation-reservation – ST -Paduwarahalli M Ramakrishna