ಬಿಜೆಪಿಯವರು ಒಂದು ವರ್ಷದ ಅವಧಿ ಪೂರೈಸಿದ್ದೇ ಅವರ ಸಾಧನೆ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯ…

ಮೈಸೂರು,ಜು,27,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು ಒಂದು ವರ್ಷದಸಂಭ್ರಮವಾಗಿದ್ದು, ಈ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.jk-logo-justkannada-logo

ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಬಿಜೆಪಿ ಸರ್ಕಾರದ ಒಂದು ವರ್ಷದ ದುರಾಡಳಿತ ಹಾಗೂ 2 ತಿಂಗಳಲ್ಲಿ 10000 ಕೋಟಿ ಸಾಲ ಮಾಡಿದ್ದಾರೆ. ಬಿಜೆಪಿಯವರು ಒಂದು ವರ್ಷದ ಅವಧಿ ಪೂರೈಸಿದ್ದೆ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.

ಹಿಂದೆ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ 960000 ಕೋಟಿ ಸಾಲ ಮಾಡಿದ್ದರು. ಅದನ್ನೆ ಬಿಜೆಪಿಯವರು ಊರೆಲ್ಲಾ ಡಂಗೂರ ಸಾರಿದ್ದರು. ಆದರೆ ಈಗ ಬಿಜೆಪಿಯವರು ಕೇವಲ ಎರಡೇ ತಿಂಗಳಲ್ಲಿ ಆರ್ಬಿಐ ನಿಂದ 10000 ಕೋಟಿ ಸಾಲ ಮಾಡಿದ್ದಾರೆ. ಒಂದು ವರ್ಷದಲ್ಲಿ ಬಿಜೆಪಿಯವರು ಬರೋಬ್ಬರಿ 92000 ಕೋಟಿ ಸಾಲ ಮಾಡಿದ್ದಾರೆ. ಇದೇ ಏನು ನಿಮ್ಮ ಸಾಧನೆ.? ಎಂದು ಲಕ್ಷ್ಮಣ್ ಪ್ರಶ್ನಿಸಿದರು.

ನಿಮ್ಮ ಸಾಧನೆ ಪಟ್ಟಿಯಲ್ಲಿ ಸ್ಮಶಾನದಲ್ಲಿ ಶವವನ್ನು ಶವಪೆಟ್ಟಿಗೆಯಲ್ಲಿ ಹೂಳುವುದಕ್ಕೆ 250 ರೂಪಾಯಿ. ಇನ್ನು ವಿದ್ಯುತ್ ಚಿತಾಗಾರದಲ್ಲಿ ಸುಟ್ಟ ಶವಗಳ ಬೂದಿಯನ್ನು ಪಡೆಯುವುದಕ್ಕೆ ಜನರಿಂದ 100 ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತಿತ್ತು. ಒಟ್ಟು ಆ 350 ರೂಪಾಯಿಯನ್ನು ಸರ್ಕಾರ ಮನ್ನಾ ಮಾಡಿದೆ ಎಂದು ಹೇಳುವ ನಿಮಗೆ ನಾಚಿಕೆಯಾಗಬೇಕು ಎಂದು ಎಂ ಲಕ್ಷ್ಮಣ್ ಕಿಡಿಕಾರಿದರು.

ಅಶೋಕ್ ಒಬ್ಬ ಅಡ್ಜಸ್ಟಬಲ್ ಪರ್ಸನ್ ಎಂದು ನಿಮ್ಮ ಹೈಕಮಾಂಡ್ ಗೂ ಗೊತ್ತು…mysore-bjp-achievement-one-year-kpcc-spokesman-m-laxman

ಇದೇ ವೇಳೆ ಕಂದಾಯ ಸಚಿವ ಆರ್. ಆಶೋಕ್ ವಿರುದ್ಧ ಹರಿಹಾಯ್ದ ಎಂ. ಲಕ್ಷ್ಮಣ್, ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ನಿಮಗಿಲ್ಲ. ನೀವು ಹಿಂದೆ ಉಪಮುಖ್ಯಮಂತ್ರಿಯಾಗಿದ್ದವರು, ಈಗ ನೀವು ಮಂತ್ರಿಯಾಗಿದ್ದೀರಿ. ಅಶೋಕ್ ಒಬ್ಬ ಅಡ್ಜಸ್ಟಬಲ್ ಪರ್ಸನ್ ಎಂದು ನಿಮ್ಮ ಹೈಕಮಾಂಡ್ ಗೂ ಗೊತ್ತು ಅದಕ್ಕೆ ನಿಮ್ಮನ್ನು ಡಿಮೋಟ್ ಮಾಡಿರುವುದು. ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಾನವನ್ನೇ ಉಳಿಸಿಕೊಳ್ಳುಲು ಹೆಣಗಾಡುತ್ತಿರುವ ನಿಮಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ವಾಗ್ದಾಳಿ ನಡೆಸಿದರು.

Key words: mysore- BJP- achievement – one-year -KPCC spokesman-M. Laxman