Friday, October 9, 2026

BDA Apartments

Home Front Page ಮೋದಿ ಫೋಟೊ ಫೈಟ್: ಕೆಎಸ್ ಈಶ್ವರಪ್ಪಗೆ ಬಿವೈ ವಿಜಯೇಂದ್ರ ಟಾಂಗ್.

ಮೋದಿ ಫೋಟೊ ಫೈಟ್: ಕೆಎಸ್ ಈಶ್ವರಪ್ಪಗೆ ಬಿವೈ ವಿಜಯೇಂದ್ರ ಟಾಂಗ್.

ಬೆಂಗಳೂರು,ಏಪ್ರಿಲ್, 11,2024 (www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಾಕತ್ತಿದ್ದರೆ ಪ್ರಧಾನಿ ಮೋದಿ ಫೋಟೋ ಬಳಸದೇ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಲಿ ಎಂದು ಸವಾಲು ಹಾಕಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಈಶ್ವರಪ್ಪ ಮಾತು ಕೇಳಿ ಗಾಬರಿಯಾಯ್ತು. ಪ್ರಧಾನಿ ಮೋದಿ ಫೋಟೊವನ್ನು ಬಿಜೆಪಿಯವರಾದ ನಾವು ಬಳಸದೇ ಬೇರಯವರು ಬಳಸಲು ಸಾಧ್ಯವೇ..? ಎಂದು ಪ್ರಶ್ನಿಸಿದರು.ಮೋದಿ ಫೋಟೊ ಫೈಟ್: ಕೆಎಸ್ ಈಶ್ವರಪ್ಪಗೆ ಬಿವೈ ವಿಜಯೇಂದ್ರ ಟಾಂಗ್ by vijayendra.jpg1

ಪ್ರಧಾನಿ ಮೋದಿ ಭಾರತ ಮತ್ತು ಬಿಜೆಪಿಯ ಹೆಮ್ಮೆ. ಶಿವಮೊಗ್ಗದಲ್ಲಿ ಬಿಜೆಪಿ ಎರಡು ಅಂಶಗಳ ಮೇಲೆ ಮತ ಯಾಚಿಸುತ್ತಿದೆ. ಮೊದಲನೇಯದಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಮಾಡಿರುವ ಸಾಧನೆ, ಅವರ ಜನಪ್ರಿಯತೆ ಹಾಗೂ ಅಲ್ಲಿನ ಕ್ರಿಯಾಶೀಲ ಸಂಸದ ಬಿ.ವೈ.ರಾಘವೇಂದ್ರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮೇಲೆ ಮತಯಾಚಿಸುತ್ತದೆ ಎಂದರು.

Key words: Modi, Photo, KS Eshwarappa, by Vijayendra