10 ವರ್ಷದಲ್ಲಿ ಕನ್ನಡಿಗರಿಗೆ ಏನ್ ಮಾಡಿದ್ರಿ: ಮೋದಿ ರಾಜ್ಯ ಪ್ರವಾಸ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ.

ಕಲಬುರಗಿ,ಏಪ್ರಿಲ್,11,2024 (www.justkannada.in):  ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಈ ನಡುವೆ ಮೋದಿ ಅವರ ರಾಜ್ಯ ಪ್ರವಾಸ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ದೇಶದ ಪ್ರಧಾನಿ ಎಲ್ಲಾದರೂ ಪ್ರಚಾರ ಮಾಡಬಹುದು.ಆದರೆ ರಾಜ್ಯಕ್ಕೆ ಬಂದು ನಮಗೇನು ಕೊಟ್ಟಿದ್ದಾರೆ ಎಂದು ಅವರು ಹೇಳಲಿ. 10 ವರ್ಷದಲ್ಲಿ ಕನ್ನಡಿಗರಿಗೆ ಏನ್ ಮಾಡಿದ್ರಿ  ಎಂದು ತಿಳಿಸಿ ಎಂದು ವಾಗ್ದಾಳಿ ನಡೆಸಿದರು.

ಬರ ನಿರ್ವಹಣೆಗೆ ಏಕೆ ದುಡ್ಡು ಕೊಟ್ಟಿಲ್ಲ ಅಂತ ತಿಳಿಸಬೇಕು. ಸುಮ್ಮನೆ ಪ್ರವಾಸಿಗರಂತೆ ಬಂದು ಹೋದರೆ ಏನು ಪ್ರಯೋಜನ? ಏಕೆ ತಾರತಮ್ಯಮಾಡುತ್ತಿದ್ದೀರಾ ಎಂದು ಜನರಿಗೆ ಉತ್ತರ ಕೊಡಿ. ಸುಮ್ಮನೆ ಬಂದ ಪುಟ್ಟ ಹೋದ ಪುಟ್ಟ ಅಂದರೆ ಹೇಗೆ? ಎಂದು  ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.

Key words: PM-Modi- state tour- Minister- Priyank Kharge