ಬೈಲಕುಪ್ಪೆಯಲ್ಲಿ ಟಿಬೆಟಿಯನ್ನರಿಂದ ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕಿ ಆಕ್ರೋಶ…

Promotion

ಮೈಸೂರು,ಅಕ್ಟೊಬರ್,2,2020(www.justkannada.in):  ಪದೇ ಪದೇ ಚೀನಾ ದೇಶವು ಭಾರತದ ಗಡಿ ತಂಟೆಗೆ ಬರುವುತ್ತಿರುವುದನ್ನು ಖಂಡಿಸಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿ ಟಿಬೆಟಿಯನ್ನರು ಚೀನಾ ವಸ್ತುಗಳನ್ನ ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಗಡಿಯಲ್ಲಿ ದೇಶದ ಯೋಧರ ಜತೆ ಸಂಘರ್ಷ ನಡೆಸುತ್ತಿರುವ ಹಾಗೂ ಕೊರೋನಾ ಮಹಾಮಾರಿಯನ್ನು ಪ್ರಪಂಚದಾದ್ಯಂತ ಹರಡಲು ಕಾರಣವಾಗಿರುವ ಚೀನಾ ವಿರುದ್ಧ ಪ್ರತಿಭಟಿಸಿ ಬೈಲಕುಪ್ಪೆಯಲ್ಲಿ ಚೀನಾ ವಸ್ತುಗಳಿಗೆ ಟಿಬೆಟಿಯನ್ನರು ಬಹಿಷ್ಕಾರ ಹಾಕಿದರು. ಜತೆಗೆ  ಚೀನಾ ವಸ್ತುಗಳನ್ನ ಸುಟ್ಟು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.   Mysore –bailakuppe-Tibetans-Excommunication - Chinese -things

ನ್ಯಾಷನಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಟಿಬೆಟ್ ಸಂಘಟನೆಯಿಂದ ಆನ್ ಲೈನ್ ಮೂಲಕ ಚೀನಾ ವಸ್ತುಗಳ ಬಹಿಷ್ಕರಿಸುವ ಆಂದೋಲನ ನಡೆಸಲಾಗುತ್ತಿದೆ. ದೇಶದ 5 ಪ್ರಮುಖ ಟಿಬೆಟನ್ ಎನ್ ಜಿಓಗಳು ಆಂದೋಲನ ನಡೆಸುತ್ತಿದ್ದು, ಚೀನಾದಲ್ಲಿ ನಡೆಯುವ 2022 ಒಲಂಪಿಕ್ಸ್ ಗೆ ಟಿಬೆಟಿಯನ್ ಪ್ರಜೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.

Key words: Mysore –bailakuppe-Tibetans-Excommunication – Chinese -things