‘ಆದ್ಯಾ’ ಕಥೆ ಹೇಳಲು ಥಿಯೇಟರ್’ಗೆ ಬರ್ತಿದ್ದಾರೆ ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್, ಸಂಗೀತ ಭಟ್

ಬೆಂಗಳೂರು, ಫೆಬ್ರವರಿ 20, 2020 (www.justkannada.in): ಟಿ.ಜಿ.ವಿಶ್ವಪ್ರಸಾದ್ ಹಾಗೂ ರಘುನಾಥ್ ಎಸ್ ಅವರು ನಿರ್ಮಿಸಿರುವ ಆದ್ಯಾ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚೈತನ್ಯ ಕರಿಹಳ್ಳಿ.ಎಂ ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಮಲ್ಹಾರಭಟ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಅವರ ಸಂಕಲನವಿರುವ ಈ ಚಿತ್ರಕ್ಕೆ ರೋಹಿತ್ ಪದಕಿ ಸಂಭಾಷಣೆ ಬರೆದಿದ್ದಾರೆ.

ಚಿರಂಜೀವಿ ಸರ್ಜಾ ನಾಯಕಾರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಗೀತಾ ಭಟ್, ಶ್ರುತಿ ಹರಿಹರನ್, ಶಶಾಂಕ್ ಪುರುಷೋತ್ತಮ್, ರವಿಶಂಕರ್ ಗೌಡ, ಪ್ರಮೋದ್ ಶೆಟ್ಟಿ, ಗಿರಿರಾಜ್, ಚೈತ್ರಾ ರಾವ್, ಹರೀಶ್ ಶೇಷಾದ್ರಿ ಮುಂತಾದವರಿದ್ದಾರೆ.